This page has not been fully proofread.

ತನ್ನ ತೇಜಸ್ಸಿನಿಂದ ಅಂತರಿಕ್ಷವನ್ನೆಲ್ಲ ತುಂಬುವವಳೂ, ಉದಕಕ್ಕೆ
ನಿರ್ಮಾಪಕಳೂ ಆದ ಊರ್ವಶಿಯನ್ನು ಶ್ರೇಷ್ಠ ಮಾನವನಾದ ನಾನು
(ಪುರೂರವ) ನನ್ನ ವಶಕ್ಕೆ ತೆಗೆದುಕೊಳ್ಳುತ್ತೇನೆ. ಉತ್ತಮವಾದ ಕರ್ಮ
ಕರ್ತೃವಾದ ಪುರೂರವನು ನಿನ್ನನ್ನು ಸಮೀಪಿಸಿ, ನಿನ್ನ ಸಹಸೌಖ್ಯವನ್ನು
ಅನುಭವಿಸಲಿ. ನಿನ್ನ ವಿರಹದಿಂದ ನನ್ನ ಹೃದಯವು ತಪಿಸುತ್ತಿದೆ
ಹಿಂತಿರುಗು" ಋಗ್ವದ ಮಂ. ೧೦.೯೫-೧೭. ಈ ಸೂಕ್ತದ ಹಿನ್ನೆಲೆ
ಉತ್ತರ ಮೇಘದೂತಕ್ಕೆ ಇದೆ.
 
ಊರ್ವಶಿ ಮತ್ತು ಪುರೂರವಸ್ಸಿನ ಸಂಭಾಷಣೆ ರೂಪವಾದ ಪ್ರಕರಣವು
ಲೌಕಿಕವಾದ ಪ್ರೇಮ ಮತ್ತು ವಿರಹಗಳನ್ನು ಪ್ರಕಾಶಪಡಿಸುವುದರ ಮೂಲಕ
ಅಲೌಕಿಕವಾದ ತತ್ತ್ವವನ್ನು ಪ್ರತಿಪಾದಿಸುವ ಆಖ್ಯಾನಗಳಲ್ಲಿ ಒಂದಾಗಿದೆ.
 
ವಿಶೇಷ : ಕಾರ್ತಿಕ ಶುಕ್ಲ ಏಕಾದಶಿಗೆ ಉತ್ಥಾನ ಏಕಾದಶಿ' 'ಬೋಧಿನಿ
ಏಕಾದಶಿ' ಎಂಬ ಹೆಸರುಗಳು ಪ್ರಚಾರದಲ್ಲಿವೆ. ದೇವರು ಅಂದು
 
ಏಳುತ್ತಾನೆ. ತುಳಸಿಯ ಕೂಡ ಅವನ ವಿವಾಹವಾಗುತ್ತದೆ. ಕರಿಯ
ತುಳಸಿಗೆ 'ಕುಬೇರಕ' ಎನ್ನುತ್ತಾರೆ ಎಂಬುದು ಲಕ್ಷಿಸುವಂಥ ಮಾತು. ಭಾಗವತ
ಸಾಂಪ್ರದಾಯದವರು ಆಷಾಢ ಕಾರ್ತಿಕಕ್ಕೆ ಪಂಢರಪುರಕ್ಕೆ 'ವಾರಿ'
ಹೋಗುತ್ತಾರೆ. ಇಂಥ ಒಂದು ವ್ರತಕಥೆಯನ್ನು ಜಗದ್ವಿಖ್ಯಾತವಾಗುವಂತೆ,
ಕಾವ್ಯವಾಗಿ ಮಾರ್ಪಡಿಸಿದ್ದು ಕಾಲಿದಾಸನ ಪ್ರತಿಭೆಗೆ ಭೂಷಣವೆಂದೇ
ಹೇಳಬಹುದು. ಕಾರ್ತಿಕದೊಳಗಿನ ಧರಣೀವ್ರತವನ್ನು ಶಕುಂತಲೆ ಕೂಡ
ಆಚರಿಸಿದ್ದಳು ಎಂದು ವರಾಹ ಪುರಾಣವು ಹೇಳುತ್ತದೆ. ಇದು ಯೋಗೇಶ್ವರ
ದ್ವಾದಶಿ ವ್ರತವು, ಯಕ್ಷನ ವಿಯೋಗ ಶಾಪ ಹೋಗಿ ಯಕ್ಷಯಕ್ಷಿ ಮಿಲನದ
ಯೋಗ ತರುತ್ತದೆ.
 
೨೬ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂದ್ರೆ