This page has been fully proofread once and needs a second look.

ಬಳೆಯ ಚುಚ್ಚಿ , ಮಳೆ ಸುರಿಯ ಹಚ್ಚಿ , ಕೆಳಗಿಚ್ಛೆಯಂತೆ ಮೆಚ್ಚಿ
ದಿವ್ಯ ಯುವತಿಯರು ಜಳಕ ಮಾಡೆ ಮಾಡ್ಯಾರು ಮೋಡ ಕೆಚ್ಚಿ
ಮೋಕ್ಷ ಕೊಡರು ದುಡಿಸುವರು ದಣಿಯೆ, ಬಲು ಮೆತ್ತನವನ ಕಂಡು
ಆಟಕಾಗಿ ಗದ್ದರಿಸಿ ಒಮ್ಮೆ ನಡೆ ನಿನ್ನ ಬಿಡಿಸಿಕೊಂಡು ॥ ೬೧
 
ಚೆನ್ನ ಹೊನ್ನ ತಾವರೆಯ ಪಡೆವ ಮಾನಸದ ನೀರು ಕುಡಿಯೈ
ನೀರ ಕುಡಿಯುತಿರೆ ಬಟ್ಟೆ ಮುಸುಕು ಐರಾವತಕ್ಕೆ ಹಿಡಿಯೈ ॥
ಕಲ್ಪವೃಕ್ಷಗಳ ಚಿಗುರು ಎಲೆಯ ತೂರಾಡು ತಾರು ಮಾರು
ಗೆಳೆಯನಲ್ಲಿ ಬಂದಿರುವೆ ಇಲ್ಲಿ ನಿನ್ನಾಟ ತಡೆವರಾರು ॥ ೬೨
 
ಪ್ರಿಯನ ತೊಡೆಗೆ ಹರಿದಿರುವ ಸೇಲೆಯೆನೆ ಗಂಗೆ ಅಲ್ಲಿ ಹರಿಯೆ
ಮೋಹಮುತ್ತು ಮುಡಿದಲ್ಲಿ ಮಾಡ ರಮಣಿಯರ ತೆರದಿ ಮೆರೆಯೆ ॥
ಹೋಗು ನೋಡು ಒಂದೊಂದು ಸಲಕೆ ಈ ಅಲಕೆಯಿಂದ ಬೇರೆ
ಕಣ್ಣುಮುಟ್ಟೆ ಇನ್ನೊಮ್ಮೆ ಕಾಣದೇ ಕಂಡೆ ಎನ್ನಲಾರೆ ॥ ೬೩
 

 
ಶಬ್ದಾರ್ಥ : ಉದಕ=ನೀರು. ಕೋಡು=ಬೆಟ್ಟದತುದಿ, ಅನುಚರ=ಸೇವಕ, ಒಸಗೆ=ಶುಭಸಮಾಚಾರ.
ಕುರುಳೋಳಿ-ಕುರುಳ್=ಕೂದಲು; ಓಳಿ=ಸಮೂಹ. ಚಾದಗೆ=ಚಾತಕಪಕ್ಷಿ-ಮಳೆಯ ಹನಿಯನ್ನು ಕುಡಿದು ಜೀವಧಾರಣೆ ಮಾಡುವುದೆಂದು ನಂಬಿಗೆ, ಬಂಜು=ಬಂಜೆ, ಅಫಲ ಅವಸ್ಥೆ, ತವಿಸು=ಕಡಿಮೆ ಮಾಡು.
ಸವಿಸಿ=ರುಚಿನೋಡಿ. ನಿಚುಲ-ಹೊದಿಕೆ, ಕವಚ, ಮಾಳ-=ಹೊಲದಲ್ಲಿಯ ಎತ್ತರವಾದ ಪ್ರದೇಶ.
ಎಲೆಮಾಡ=ಮೇಲಕ್ಕೆ ಏರಬಲ್ಲ ಎಲೆಬಳ್ಳಿ, ರೇವೆ=ನದಿ, ಕಡವಾಲ=ಕದಂಬ ವೃಕ್ಷ, ದಶಾರ್ಣ=ಮಧ್ಯಪ್ರದೇಶ.
ಸುಂದು=ಮಲಗು, ವಿಶ್ರಾಂತಿಪಡೆ, ಕಮರೆ=ಬಾಡಲು, ಸುಟ್ಟುಹೋಗಲು,
ಪಾಮರ ಪಾಮರಿಯರು=ಕಿರಾತ ಪುರುಷರು ಸ್ತ್ರೀಯರು, ಸುಸಿಲ=ಸಂಭೋಗ, ಶಿಪ್ರಾವಾತ=ಮಂದವಾದ ಗಾಳಿ, ತರಹರಿಸು=ತಾಳ್ಮೆಯಿಂದ ಇರು.
ಚಳ-ಕಾಂತಿಯುಕ್ತ, ಉರು=ಅಧಿಕ. ಜಾಡು=ಸಾಲು. ಈಡು=ತೃಪ್ತಿದಾಯಕ. ಕೆಚ್ಚಿ=ಕೆತ್ತಿ .
ತಾರುಮಾರು=ತ್ವರಿತಗತಿಯಿಂದ, ಸೇಲೆ-ಸೆಲ್ಲೆ , ಬಟ್ಟೆ .