2023-02-19 20:40:08 by ambuda-bot
This page has not been fully proofread.
೬೧
ಬಳೆಯ ಚುಚ್ಚಿ , ಮಳೆ ಸುರಿಯ ಹಚ್ಚಿ , ಕೆಳಗಿಚ್ಛೆಯಂತೆ ಮೆಚ್ಚಿ
ದಿವ್ಯ ಯುವತಿಯರು ಜಳಕ ಮಾಡೆ ಮಾಡ್ಯಾರು ಮೋಡ ಕೆಚ್ಚಿ
ಮೋಕ್ಷ ಕೊಡರು ದುಡಿಸುವರು ದಣಿಯೆ, ಬಲು ಮೆತ್ತನವನ ಕಂಡು
ಆಟಕಾಗಿ ಗದ್ದರಿಸಿ ಒಮ್ಮೆ ನಡೆ ನಿನ್ನ ಬಿಡಿಸಿಕೊಂಡು
೬೨
ಚೆನ್ನ ಹೊನ್ನ ತಾವರೆಯ ಪಡೆವ ಮಾನಸದ ನೀರು ಕುಡಿಯೊ
ನೀರ ಕುಡಿಯುತಿರೆ ಬಟ್ಟೆ ಮುಸುಕು ಐರಾವತಕ್ಕೆ ಹಿಡಿಯ್ಯ ।
ಕಲ್ಪವೃಕ್ಷಗಳ ಚಿಗುರು ಎಲೆಯ ತೂರಾಡು ತಾರು ಮಾರು
ಗೆಳೆಯನಲ್ಲಿ ಬಂದಿರುವೆ ಇಲ್ಲಿ ನಿನ್ನಾಟ ತಡೆವರಾರು ।
೬೩
ಪ್ರಿಯನ ತೊಡೆಗೆ ಹರಿದಿರುವ ಸೇಲೆಯೆನೆ ಗಂಗೆ ಅಲ್ಲಿ ಹರಿಯೆ
ಮೋಹಮುತ್ತು ಮುಡಿದಲ್ಲಿ ಮಾಡ ರಮಣಿಯರ ತೆರದಿ ಮೆರೆಯೆ
ಹೋಗು ನೋಡು ಒಂದೊಂದು ಸಲಕೆ ಈ ಅಲಕೆಯಿಂದ ಬೇರೆ
ಕಣ್ಣುಮುಟ್ಟೆ ಇನ್ನೊಮ್ಮೆ ಕಾಣದೇ ಕಂಡೆ ಎನ್ನಲಾರೆ ॥
ಶಬ್ದಾರ್ಥ : ಉದಕ=ನೀರು. ಕೋಡು=ಬೆಟ್ಟದತುದಿ, ಅನುಚರ=ಸೇವಕ, ಒಸಗೆ=ಶುಭಸಮಾಚಾರ.
ಕುರುಳೋಳಿ-ಕುರುಳ್=ಕೂದಲು; ಓಳಿ=ಸಮೂಹ. ಚಾದಗೆ=ಚಾತಕಪಕ್ಷಿ-ಮಳೆಯ ಹನಿಯನ್ನು ಕುಡಿದು
ಜೀವಧಾರಣೆ ಮಾಡುವುದೆಂದು ನಂಬಿಗೆ, ಬಂಜು=ಬಂಜೆ, ಅಫಲ ಅವಸ್ಥೆ, ತವಿಸು=ಕಡಿಮೆ ಮಾಡು.
ಸವಿಸಿ=ರುಚಿನೋಡಿ. ನಿಚುಲ-ಹೊದಿಕೆ, ಕವಚ, ಮಾಳ-ಹೊಲದಲ್ಲಿಯ ಎತ್ತರವಾದ ಪ್ರದೇಶ.
ಎಲೆಮಾಡ=ಮೇಲಕ್ಕೆ ಏರಬಲ್ಲ ಎಲೆಬಳ್ಳಿ, ರೇವೆ=ನದಿ, ಕಡವಾಲ=ಕದಂಬ ವೃಕ್ಷ, ದಶಾರ್ಣ=ಮಧ್ಯಪ್ರದೇಶ.
ಸುಂದು=ಮಲಗು, ವಿಶ್ರಾಂತಿಪಡೆ, ಕಮರೆ=ಬಾಡಲು, ಸುಟ್ಟುಹೋಗಲು, ಪಾಮರ ಪಾಮರಿಯರು=ಕಿರಾತ
ಪುರುಷರು ಸ್ತ್ರೀಯರು, ಸುಸಿಲ=ಸಂಭೋಗ, ಶಿಪ್ರಾವಾತ=ಮಂದವಾದ ಗಾಳಿ, ತರಹರಿಸು=ತಾಳ್ಮೆಯಿಂದ
ಇರು. ಚಳ-ಕಾಂತಿಯುಕ್ತ, ಉರು=ಅಧಿಕ. ಜಾಡು=ಸಾಲು. ಈಡು=ತೃಪ್ತಿದಾಯಕ. ಕೆಚ್ಚಿ=ಕೆತ್ತಿ .
ತಾರುಮಾರು=ತ್ವರಿತಗತಿಯಿಂದ, ಸೇಲೆ-ಸೆಲ್ಲೆ , ಬಟ್ಟೆ ,
ಕನ್ನಡ ಮೇಘದೂತ – ಭಾವಾನುವಾದ ಖಂಡಕಾವ್ಯ : ಲೇ : ದ. ರಾ. ಬೇಂದ್ರೆ (ಅಂಬಿಕಾತನಯದತ್ತ)
೨೫