2023-02-26 13:24:12 by jayusudindra
This page has been fully proofread once and needs a second look.
ಕೃಷ್ಣನಣ್ಣನಾ ಸಮರ ತೊರೆದು ಒಲಿದಿವಳ ದಂಡೆ ಹಿಡಿದ
ಕುಡಿಯೊ ನೀನು ಸರಸತಿಯ ನೀರ ಬಲರಾಮನನ್ನು ನಂಬಿ
ಬಣ್ಣವಿರಲಿ ಕರಿ ; ಬೆಳ್ಳಗಾಗು ಒಳಗೆಲ್ಲ ಬೆಳಕು ತುಂಬಿ
೫೦
ಜನ್
ಸಗರ ಸಂತತಿಗೆ ಸ್ವರ್ಗದೊಂದು ಸೋಪಾನವಾಗಿ ಇಳೆಗೆ
ಗೌರಿ ಮುರಿವಳಬ್ಬಬ್ಬ ಹುಬ್ಬ-ಎನೆ ನಕ್ಕು ನೊರೆಗಳಿಂದ
ಜಗ್ಗುತಿಹಳು ಶಿವಜಡೆಯ ಚಂದ್ರಮಣಿ ಕೈಯ ತೆರೆಗಳಿಂದ
ನೀನು ಬಾನಿನಲಿ ಕಾಲು ಸೋತು ಬರೆ, ಗಂಗೆ ಕುಡಿಯಲೆಂದು
ಸ್ವರ್ಗದಾನೆಯೇ ಸೊಂಡೆ ಚಾಚಿದೊಲು ಕಾಂಬೆ ನೋಟವೊಂದು
ಬೇರೆ ಕಾಣುವದು ನೋಟ, ನೀರಿನ
ಗಂಗೆಯನ್ನೆ ಮತ್ತೊಂದು ಕಡೆಗೆ ಆ ಯಮುನೆ ಕೂಡಿದಂತೆ
ಮಂಜು-ಬೆಟ್ಟ ಮುಡಿಯಟ್ಟದಲ್ಲಿ ಕಸ್ತೂರಿ ಮೆಟ್ಟಿನಲ್ಲಿ
ಇಳೆಯ ತೊಳೆಯೆ, ಹೊಳೆಯಾಗಿ ಬರುವ ಸಿರಿಗಂಗೆ ಹುಟ್ಟಿನಲ್ಲಿ
ದಾರಿದಣಿವಿಕೆಯ ಕಳೆಯೊ ನೀನು ಆ ಕೋಡಿನಲ್ಲಿ ಕುಂತು
ಶಿವನ ನಂದಿ ಕೋಡೆತ್ತಿ ಒಗೆದ ಕರಿ ಮಣ್ಣ ಮುದ್ದೆಯಂತು
ದೇವದಾರು ಮರ ತಾಕಲಾಡಿ, ದಾವಾಗ್ನಿ ಕಿಡಿಯ
ಹೊತ್ತಿ ಬಾಲ, ಸುತ್ತಾಡಿ ಚಮರಿಮೃಗವೆತ್ತಿ ಬಾಲ ಬೀಸೆ
ಕುತ್ತದಲ್ಲಿ ಇರೆ ಸುರಿಸು ನೀರು ; ಉರಿ ಈಡೆ ನಿನ್ನ ಮಳೆಗೆ ?
ಕಷ್ಟ ಕಳೆವುದೇ ಇಷ್ಟವಹುದು ಉತ್ತಮರ ಶಕ್ತಿಗಳಿಗೆ
ಸಿಟ್ಟಿನಿಂದ ಸಿಡಿದೆದ್ದು ಶರಭ ಬರೆ ತಾಗಿ, ಕಂಡು ಮಿದುವು.
ಮೂಳೆಗಳ
ಆಲಿಕಲ್ಲಿನಿಂದಿಟ್ಟು ಕುಟ್ಟು , ಅದರಂಥ ಮೂಢರೊಳರೇ ?
ಮುಗಿಲಿಗೆಂದು ಕೈ ಹಾಕಿ ಹಾರಿದರೆ ಕಾಲು ಮುರಿದು ಕೊಳರೇ ?
ಕನ್ನಡ ಮೇಘದೂತ
-
-