2023-02-26 13:09:29 by jayusudindra
This page has been fully proofread once and needs a second look.
11
2
ಹೂ ಮೋಡದಿಂದ ಹೂಮಳೆಯ ಸುರಿಸು ನೀ ಬಾನಗಂಗೆಯಾಗಿ
ಸುರರಾಜ್ಯ ಸೈನ್ಯ ರಕ್ಷಣೆಗೆ ಬಂದ ಶಿವವೀರ್ಯದೊಂದು ಮೂರ್ತಿ
ಅವ ಮಿಗಿಲು ಹಗಲಿಗೂ, ಉರಿಯ ಕಂದ, ಕಿರುಕುಳವೆ ಅಂಥ ಕೀ
ಅಲ
॥
ಉದುರಿದ್ದ ನವಿಲಗರಿ ಮುತ್ತಿ ಎತ್ತಿ ಕ
ನೈದಿಲೆಯ ಬಳಿಗೆ ಇರಿಸುವಳು ಅವಳು ಮಗನೊಂದು ಮುದ್ದು ಸವಿಗೆ
ಶಿವಮೌಳಿ ಚಂದ್ರಕಳೆಗಿಂತ ಬೆಳ್ಳಗುಡಿಗಣ್ಣ ನವಿಲ ಕುಣಿಸು
ಅಗೊ ನಿನ್ನ ಮೊಳಗು, ಆ ಗುಡ್ಡದೊಳಗು, ಸೊಲ್ಲಾಗುವಂತೆ ತಣಿಸು
ಹರಶರಗಳಲ್ಲಿ ಹುಟ್ಟಿದ್ದ ದೇವನಾ ಸೇವೆಯಾಗೆ ಲೀಲೆ
ವರ ಸಿದ್ಧದ್ವಂದ್ವಗಳು ವೀಣೆಗೂಡಿ, ಮಳೆ-ಹಾದಿ ಬಿಟ್ಟ ಮೇಲೆ
ಗೋಯಾಗದೊಂದು ಅನುರಾಗದಿಂದ ಬರುವಲ್ಲಿ ಬಾರೊ ಸುರಿಯೆ
ಹಾತೊರೆವ ಚರ್ಮವತಿ ರಂತಿದೇವನಾ ಕೀರ್ತಿಯಂತೆ ಮೆರೆಯೆ ॥
ಕೃಷ್ಣವರ್ಣವನೆ ಕಳವು ಮಾಡಿದಾ ಮೋಡ ನೀನು ತಗ್ಗಿ
ನದಿಯ ನೀರು ಕುಡಿವಾಗ ಕಾಣುವಿಯೊ, ಬಾನಿನಲ್ಲಿ ಹಿಗ್ಗಿ
ನೋಡಲಿರುವ ಆ ದೇವಜಾತಿಗಳ ಕ
ಭೂಮಿ ತೊಟ್ಟ ಅಣಿಮುತ್ತು ಹಾರದಲ್ಲಿ ಇಂದ್ರನೀಲವಾಗಿ
ಮುಂದೆ ದಶಪುರದ ಹೆಣ್ಣ ಹುಬ್ಬು ಕರೆಯುವದು ಲೋಲವಾಗಿ
ಎವೆಗಳಾಟದಲಿ ನೋಟವೆಸೆಯುತಿರೆ ಕಪ್ಪು ನೀಲವಾಗಿ
ಯಾರ ಕಣ್ಣು ಹೋಲುವವು ಮೊಲ್ಲೆಯೊಡನಾಡಿ-ತುಂಬಿಯನ್ನು
ಅವರ ಕಣ್ಣ ಕುತುಕಕ್ಕೆ ನೀಡು ನಿನ್ನಾತ್ಮಬಿಂಬವನ್ನು
ಬಾರೊ ದಾಟಿ ಬಹ್ಮಾಧಿವರ್ತವನು ನಿನ್ನ ಛಾಯೆ ಚೆಲ್ಲಿ
ಎಲ್ಲಿ ಇಂದಿಗೂ ಹಿಂದಿನೆಲಬು ಆ ಕುರುಕ್ಷೇತ್ರದಲ್ಲಿ
ಅರಸುಗಿರಸುಗಳ ಚೆಂಡು ಕಳೆದ ಗಾಂಡೀವಧನ್ವ ಅಂದು
ನೀನು ಕಮಲಗಳ ಸೆಳೆವ ಹಾಗೆ ಮಳೆ
೨೨ ಕನ್ನಡ ಮೇಘದೂತ
-
-