Proofing

✦

This page has not been fully proofread.

೪೩
 
11
 
2
ಈ ಗಿರಿಯ ಜೀವ, ಆ ಸ್ಕಂದದೇವ, ಅಭಿಷೇಕ ಮಾಡು ಬಾಗಿ
ಹೂ ಮೋಡದಿಂದ ಹೂಮಳೆಯ ಸುರಿಸು ನೀ ಬಾನಗಂಗೆಯಾಗಿ
ಸುರರಾಜ್ಯ ಸೈನ್ಯ ರಕ್ಷಣೆಗೆ ಬಂದ ಶಿವವೀರ್ಯದೊಂದು ಮೂರ್ತಿ
ಅವ ಮಿಗಿಲು ಹಗಲಿಗೂ, ಉರಿಯ ಕಂದ, ಕಿರುಕುಳವೆ ಅಂಥ ಕೀತಿ
 
ಅಲ
 
॥
 
ಉದುರಿದ್ದ ನವಿಲಗರಿ ಮುತ್ತಿ ಎತ್ತಿ ಕಣೋತ್ತಿ ಶಿವೆಯು ಕಿವಿಗೆ
ನೈದಿಲೆಯ ಬಳಿಗೆ ಇರಿಸುವಳು ಅವಳು ಮಗನೊಂದು ಮುದ್ದು ಸವಿಗೆ
ಶಿವಮೌಳಿ ಚಂದ್ರಕಳೆಗಿಂತ ಬೆಳ್ಳಗುಡಿಗಣ್ಣ ನವಿಲ ಕುಣಿಸು
ಅಗೊ ನಿನ್ನ ಮೊಳಗು, ಆ ಗುಡ್ಡದೊಳಗು, ಸೊಲ್ಲಾಗುವಂತೆ ತಣಿಸು
 
೪೫
 
ಹರಶರಗಳಲ್ಲಿ ಹುಟ್ಟಿದ್ದ ದೇವನಾ ಸೇವೆಯಾಗೆ ಲೀಲೆ
ವರ ಸಿದ್ಧದ್ವಂದ್ವಗಳು ವೀಣೆಗೂಡಿ, ಮಳೆ-ಹಾದಿ ಬಿಟ್ಟ ಮೇಲೆ
ಗೋಯಾಗದೊಂದು ಅನುರಾಗದಿಂದ ಬರುವಲ್ಲಿ ಬಾರೊ ಸುರಿಯೆ
 
ಹಾತೊರೆವ ಚರ್ಮವತಿ ರಂತಿದೇವನಾ ಕೀರ್ತಿಯಂತೆ ಮೆರೆಯೆ ॥
೪೬
 
ಕೃಷ್ಣವರ್ಣವನೆ ಕಳವು ಮಾಡಿದಾ ಮೋಡ ನೀನು ತಗ್ಗಿ
ನದಿಯ ನೀರು ಕುಡಿವಾಗ ಕಾಣುವಿಯೊ, ಬಾನಿನಲ್ಲಿ ಹಿಗ್ಗಿ
ನೋಡಲಿರುವ ಆ ದೇವಜಾತಿಗಳ ಕಣೆ ಜಾಲವಾಗಿ
ಭೂಮಿ ತೊಟ್ಟ ಅಣಿಮುತ್ತು ಹಾರದಲ್ಲಿ ಇಂದ್ರನೀಲವಾಗಿ
 
೪೭
 
ಮುಂದೆ ದಶಪುರದ ಹೆಣ್ಣ ಹುಬ್ಬು ಕರೆಯುವದು ಲೋಲವಾಗಿ
ಎವೆಗಳಾಟದಲಿ ನೋಟವೆಸೆಯುತಿರೆ ಕಪ್ಪು ನೀಲವಾಗಿ
ಯಾರ ಕಣ್ಣು ಹೋಲುವವು ಮೊಲ್ಲೆಯೊಡನಾಡಿ-ತುಂಬಿಯನ್ನು
ಅವರ ಕಣ್ಣ ಕುತುಕಕ್ಕೆ ನೀಡು ನಿನ್ನಾತ್ಮಬಿಂಬವನ್ನು
 
೪೮
 
ಬಾರೊ ದಾಟಿ ಬಹ್ಮಾಧಿವರ್ತವನು ನಿನ್ನ ಛಾಯೆ ಚೆಲ್ಲಿ
ಎಲ್ಲಿ ಇಂದಿಗೂ ಹಿಂದಿನೆಲಬು ಆ ಕುರುಕ್ಷೇತ್ರದಲ್ಲಿ
ಅರಸುಗಿರಸುಗಳ ಚೆಂಡು ಕಳೆದ ಗಾಂಡೀವಧನ್ವ ಅಂದು
ನೀನು ಕಮಲಗಳ ಸೆಳೆವ ಹಾಗೆ ಮಳೆ ಬೆಳಕಿನಿಂದ ಇಂದು
 
೨೨ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂ
 
-