This page has not been fully proofread.

೩೭
 
ರಮಣರತ್ತ ಉಜ್ಜಯನಿ ರಮಣಿಯರು ಹೊರಟ ರಾತ್ರಿಯಲ್ಲಿ
ರಾಜಬೀದಿ ಕಗ್ಗತ್ತಲಾಗಿ ಕಂಗೆಡಿಸೆ, ಮಿಂಚ ಚೆಲ್ಲಿ
 

 
ದಾರಿದೋರು ಹೊಂಬೆಳಕ ಮಾಡಿ ಮಳೆ ಗುಡುಗು ಬೇಡೊ ಮೇಘಾ
ಮೊದಲೆ ಹೆದರಿದವರವರೆ, ಕಳುವಿನಲಿ ಹೋಗಬೇಕು ಬೇಗಾ
 
20
 
ಪಾರಿವಾಳ ಹಲವಾರು ಮಲಗಿದೇಳನೆಯ ಮಾಡದೊಳಗೆ
ಮಿಂಚು ಮಡದಿ ಬಳಲಿರುವಳೇನೊ ? ಮಲಗಲ್ಲಿ ಬೆಳ್ಳಬೆಳಗೆ ।
ಮುಂದೆ ದೂಡುವದು ನಿನ್ನನುದಯದಲಿ ನಮ್ಮ ನಿಮ್ಮ ನಂಟೇ
ಗೆಳೆಯಗಾಗಿ ಕೈಕೊಂಡ ಕೆಲಸವನು ನಡುವೆ ಬಿಡುವರುಂಟೇ ॥
 
ಒಂಟಿಯಾಗಿ ಇರುಳುದ್ದ ಕಳೆದ ಸತಿಗಾಗಿ ರವಿಯು ಬಹನು
ಸಾವಿರಾರು ಕರ ಚಾಚಿ ಕಮಲೆಯರ ಕಣ್ಣನೊರಿಸಲಿಹನು ।
ತನ್ನ ಹೆಂಡಿರನು ತಾನೆ ತವಿಸದಿನ್ನಾರು ಶಮಿಸಲಹುದು
ಅಡ್ಡ ನೀನು ಇರಬೇಡ ರವಿಗೆ ; ಅವ ಕೆಂಡವಾಗಬಹುದು ।
 
೪೦
 
ಹೆಸರಿನಂತೆ ಗಂಭೀರೆ ಧೀರೆ ತಿಳಿನೀರೆ ಜಲದೊಳವಳ
ಸೇರಬಲ್ಲೆ ನೆರಳಾದರೇನು ? ಸರಿ, ನೀನು ನೀರನಿವಳ ॥
ಅವಳು ನೋಡುವಳು ಚಪಲ ಮೀನ ಚಳಕುಮುದ ನೇತ್ರೆಯಾಗಿ
ತಿರುಗಿ ನೋಡು ಇಹಳವಳು ನಿನ್ನ ಅನುರೂಪ ಕ್ಷೇತ್ರವಾಗಿ ।
 
೪೧
 
ಕೈಯ ಚಾಚಿ ತಡೆವಂತೆ ನಾಚಿ ನೀರ್ಬೆತ್ತ ಬಾಗಿ ಎಳೆದು
ಹಿಡಿದರೇನವಳ ಮುಗಿಲ ಬಣ್ಣದಾ ಮಂಜುಸೀರೆ ಸೆಳೆದು ॥
ಒಯ್ಯೋ ನಿನ್ನ ಜೊತೆಗಿರಲಿ, ಮೇಘವೇ, ಪಯಣ ಬೆಳೆಸುವಾಗ
ಉಂಡು ಒಮ್ಮೆ ಬಿಡಬಹುದದಾರು ಬರಿ ಬಚ್ಚ ಚೆಲುವು ಭೋಗ
 
೪೨
 
MA
 
ನಿನ್ನ ಉಸಿರ ಹನಿ ಸೋಕಿ, ನೆಲದ ನರುಗಂಪು ಹೊಮ್ಮಿ ತಾಗಿ ।
ಬಂದ ಗಾಳಿ ಕುಡಿದಾನೆ ತಾನೆ ಹರಿ ಮೂಗೆ ಸೊಂಡಿಲಾಗಿ
ಕಾಡ ಅತ್ತಿ ಹಣೋಳಿಸುವಂಥ ತಂಗಾಳಿ ಇದಿರು ಬಂದು
ದೇವಗಿರಿಯ ಸೇರಿಸುವದಣ್ಣ, 'ಬಿಜ ಮಾಡಿ ತಾವು' ಎಂದು
೨೦ ಕನ್ನಡ ಮೇಘದೂತ – ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂದ್ರೆ