This page has not been fully proofread.

ಗುರುಗಳಾಣತಿಯಯ ಎಲ್ಲ ಶಿಷ್ಯರೂ ಕೂಡಿ
ಪಂಚಮ ಸ್ಕಂಧದ ಪ್ರತಿಗಳೆಲ್ಲವ ನೋಡಿ
 
ಓಡೋಡಿ ಬಂದರು ಗುರುಗಳಿಗೆ
 
ಪೂರ್ಣ ಪ್ರಜ್ಞರು ನುಡಿದ ಪಂಚಮಸ್ಕಂಧವದು
ವೇದವ್ಯಾಸರ ರಚಿತ ಮೂಲ ಕೃತಿಯಾಗಿತ್ತು!
ಇದ ಕಂಡ ಎಲ್ಲರಿಗೂ ಅಚ್ಚರಿಯೋ ಅಚ್ಚರಿ!
 
ಪೂರ್ಣಪ್ರಜ್ಞರು ಸರ್ವಜ್ಞರು
 
"ಓ ಪೂರ್ಣ ಪ್ರಜ್ಞ! ಗೆಲುವು ನಿಮದಾಯ್ತಂದು
ಈ ಜನ್ಮದಲಿ ನೀವು ಒಮ್ಮೆಯೂ ಓದದಿಹ
ಇಂಥ ಗ್ರಂಥವನೆಲ್ಲ ಹೇಗೆ ಅರಿತಿರಿ ? ಹೇಳಿ"
"ಓದಿರುವೆ ಇದನೆಲ್ಲ ಪೂರ್ವ ಜನ್ಮಗಳಲ್ಲೇ
ಧರ್ಮಗ್ರಂಥಗಳೆಲ್ಲ ನಾಲಿಗೆಯಲಿ ನಲಿಯುವುವು"
ಎಂಬ ಮಾತನು ಕೇಳಿ ಚಕಿತಗೊಂಡರು ಗುರುವು
 
ಶ್ರೀ ಮಧ್ಯಕೀರ್ತಿಯ ವೈಭವ
 
ಜಗಕೆಲ್ಲ ಆಚ್ಚರಿಯ ಮೂಡಿಸುವ ಪರಿಯಲ್ಲಿ
ಪರಿಪರಿಯ ರೀತಿಯಲ್ಲಿ ಜ್ಞಾನವನ್ನು ಪಡೆದ
ಪೂರ್ಣ ಪ್ರಜ್ಞರ ಖ್ಯಾತಿ ಎಲ್ಲೆಡೆಯೂ ಹರಡಿತ್ತು
.ಕತ್ತಲೆಯನೋಡಿಸುವ ಸೂರ್ಯನ ಪ್ರಭೆಯಂತೆ
ಸುಜನಾಬ್ಬ ನಿವಹ ಆನಂದವೀಯುವ
ಚಂದ್ರಮನ ಪರಿಯಾಯ್ತು ಯತಿವರರ ಕೀರುತಿ
 
52
 
70/ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
53
 
54
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತಾಚಾರ್ಯರು ರಚಿಸಿದ ಶ್ರೀ ಸುಮಧ್ವ ವಿಜಯವೆ೦ಬ
ಮಹಾಕಾವ್ಯದ ಆನಂದಾಂಕಿತವಾದ ನಾಲ್ಕನೆಯ ಸರ್ಗದ ಕನ್ನಡ ಪದ್ಯಾನುವಾದ
 
ಸಮಾಪಿ.