This page has not been fully proofread.

ಜಯತೀರ್ಥರು, ಶ್ರೀಪಾದರಾಜರು, ವ್ಯಾಸರಾಯರು, ವಾದಿರಾಜರು,
ರಾಘವೇಂದ್ರಸ್ವಾಮಿಗಳಂತಹ ಯತಿವರೇಣ್ಯರೇ ಅಲ್ಲದೆ, ಪುರಂದರದಾಸರು,
ಕನಕದಾಸರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರಂತಹ
ದಾಸಶ್ರೇಷ್ಠರೂ ಸಹ ಮಧ್ವಮತದ ಉತ್ತಮೋತ್ತಮ ಪ್ರತಿಪಾದಕರು.
 
ಶ್ರೀ ಸುಮಧ್ವವಿಜಯ ಮಾಧ್ವ
ಸಾಹಿತ್ಯದ ಮಾಂಗಲ್ಯ ಕಾವ್ಯ.
ಶ್ರೀಮದಾಚಾರ್ಯರ ಐಹಿಕ ಬದುಕಿನ ಹಲವಾರು ಸ್ವಾರಸ್ಯಕರ ಘಟನೆಗಳನ್ನೂ ಹಾಗೂ
ಅವರ ಆಧ್ಯಾತ್ಮಿಕ ಹಿರಿಮೆಯನ್ನೂ ಚಾರಿತ್ರಿಕ ನೆಲೆಗಟ್ಟಿನಲ್ಲಿ ವಿವರಿಸುವ ಒಂದು
ಪ್ರಾಮಾಣಿಕ ಕಾವ್ಯ, ಸಂಸ್ಕೃತ ಸಾಹಿತ್ಯದಲ್ಲಿಯೇ ವಿಶಿಷ್ಟ ಸ್ಥಾನವನ್ನು ಪಡೆದಿರುವ ಈ
ಮಹಾಕಾವ್ಯ ಅಶ್ವಘೋಷನ ಬುದ್ಧ ಚರಿತೆಗಿಂತಲೂ ಹೆಚ್ಚು ಮಹತ್ವವನ್ನು
ಪಡೆದಿರುವುದಾದರೂ, ಸಂಸ್ಕೃತ ಸಾಹಿತ್ಯ ವಿಮರ್ಶನ ಕ್ಷೇತ್ರದಲ್ಲಿ ಅದಕ್ಕೆ ಲಭಿಸಬೇಕಾದ
ಸ್ಥಾನ ಲಭಿಸದಿರುವುದು ಒಂದು ದುರಂತ ಎಂದು ಅನೇಕ ವಿದ್ವಾಂಸರು ಅಭಿಪ್ರಾಯ
ಪಡುತ್ತಾರೆ.
 
ಶ್ರೀ ಸುಮಧ್ವ ವಿಜಯ' ದ ಕರ್ತೃ ಶ್ರೀಮನ್ನಾರಾಯಣ ಪಂಡಿತರು
(ಕ್ರಿ. ಶ. 1295 - 1370) ಅಸಾಮಾನ್ಯ ಪಂಡಿತ ಪರಂಪರೆಯಲ್ಲಿ ಬೆಳಗಿದ ಪ್ರಕೃತಿಗಳು.
ಲಿಕುಚ ವಂಶೋದ್ಭವರಾದ ಇವರ ತಂದೆಯ ತಂದೆ ಸುಬ್ರಹ್ಮಣ್ಯ ಪಂಡಿತರು ಅಂದಿನ
ಕಾಲದ ಪ್ರಕಾಂಡ ಪಂಡಿತರು; ಧಾರ್ಮಿಕ ಸಮಾಜದ ನೇತಾರರು. ಇವರ ಮಗ
ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು. ಇವರು
ಶ್ರೀಮಧ್ವಾಚಾರ್ಯರ ಸಮಕಾಲೀನರಲ್ಲದೆ ಒಂದು ಅರ್ಥದಲ್ಲಿ ಅವರ ಬೌದ್ಧಿಕ
ಪ್ರತಿಸ್ಪರ್ಧಿಗಳು, ಅದೈತ ತತ್ವದ ಅದ್ವಿತೀಯ ಪ್ರತಿಪಾದಕರೆನಿಸಿದ್ದ ಇವರು ಶ್ರೀ
ಮಧ್ವಾಚಾರ್ಯರೊಡನೆ ಹದಿನೈದು ದಿನಗಳ ಕಾಲ ವಾಕ್ಯಾರ್ಥದಲ್ಲಿ ಸೆಣಸಿ ಕೊನೆಗೆ
ಅವರಿಗೆ ಶರಣಾದ ಧೀಮಂತ ಚಿಂತಕರು. ಇವರ ತಮ್ಮ ಶಂಕರ ಪಂಡಿತರು ಹಾಗೂ
ಸೋದರಿ ಕಲ್ಯಾಣಿದೇವಿ ಸಹ ಶ್ರೀಮದಾಚಾರ್ಯರ ಪ್ರಮುಖ ಶಿಷ್ಯರು.
''ಸುಮಧ್ವ ವಿಜಯ'ದ ಕರ್ತೃ ಶ್ರೀಮನ್ನಾರಾಯಣ ಪಂಡಿತರು, ಶ್ರೀ ತ್ರಿವಿಕ್ರಮರ
ಪುತ್ರರು. ಇವರ ಪುತ್ರ ವಾಮನ ಪಂಡಿತರೂ ಸಹ ಖ್ಯಾತ ವಿದ್ವಾಂಸರಾಗಿದ್ದು ಅನೇಕ
ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಹದಿನಾರು ಸರ್ಗಗಳಲ್ಲಿ ರಚಿತವಾಗಿರುವ ನಾರಾಯಣ
ಪಂಡಿತಾಚಾರ್ಯರ ಸುಮಧ್ವ ವಿಜಯ ಮಹಾಕಾವ್ಯವು ಶಾಸ್ತ್ರಾನುಭೂತಿ ಮತ್ತು ಕಾವ್ಯ
ಪ್ರತಿಭೆಗಳ ಸುಂದರ ಸಂಗಮ. 'ಸುಮಧ್ವವಿಜಯ'' ವನ್ನೊಳಗೊಂಡು ಸುಮಾರು 25
ಕೃತಿಗಳನ್ನು ಇವರು ರಚಿಸಿದ್ದಾರೆ. ಶೇಷ, ಉಪಮಾ ಮೊದಲಾದ ಅಲಂಕಾರಗಳನ್ನು
ತುಂಬಾ ಸಮರ್ಥವಾಗಿ ಬಳಸುವ ಇವರ ಕಾವ್ಯಗಳ ರಚನಾ ವೈಖರಿ
ಅದ್ಭುತವಾದದ್ದು. ಮಾಧ್ವ ಪರಂಪರೆಯ ಅನೇಕ ಯತಿಶ್ರೇಷ್ಠರು ಮತ್ತು ಪಂಡಿತ
 
(viii)