This page has not been fully proofread.

ಇಂತು ಉಪದೇಶಿಸಿದ ಗುರುವರರಂದು
ಅಚ್ಯುತ ಪ್ರೇಕ್ಷರಿಗೆ ತುರ ಉಕ್ತಿಯ ನೀಡಿ
 
ತರಳಿದರು ಪರಲೋಕ ಪಯಣವನ್ನು ಬೆಳಸಿ
 
ಗುರುಗಳಾಡಿದ ಮಾತ ಎಡಬಿಡದೆ ಮೆಲಕುತ್ತ
ರೂಪ್ಯ ಪೀಠಾಲಯದ ಇಂದಿರಾಪತಿಯನ್ನು
ಹಗಲಿರುಳು ಧ್ಯಾನಿಸುತ ಸೇವೆಯಲ್ಲಿ ತೊಡಗಿದರು
 
ಗುರುವಾಗುವ ಶಿಷ್ಯನ ನಿರೀಕ್ಷೆಯಲ್ಲಿ ಅಚ್ಯುತ ಪ್ರೇಕ್ಷರು
 
ಶ್ರೀ ಹರಿಯ ತತ್ವವನ್ನು ತಿಳಿಯಲೇಬೇಕೆಂಬ
ನಿಶ್ಚಲದ ನಿಶ್ಚಯವ ಮಾಡಿದ ಯತಿಗಳಿಗೆ
ಪರಿಯ ದರುಶನವಾಯು ಪುರುಷನೊಬ್ಬನ
"ಲಭಿಸಲಿರುವನು ನಿಮಗೆ ಶಿಷ್ಯಶ್ರೇಷ್ಠನು ಮುಂದೆ
ಅವನಿಂದ ಅರಿಯಿರಿ ಎನ್ನ ತತ್ವವನು"
 
ಹರಿಯ ಆಣತಿಯತ ಇಂತು ಗುರುಗಳಿಗೆ
 
ಶ್ರೀ ಹರಿಯು ಸೂಚಿಸಿದ ಶಿಷ್ಯನಾಗಮನಕ್ಕೆ
ಕಾತುರದಿ ಕಾದರು ಅಚ್ಯುತ ಪ್ರೇಕ್ಷರು
ಅದುವರೆಗೆ ಶ್ರೀ ಹರಿಯ ಕೈಂಕರ್ಯ ಸೇವೆ !
ಒಂದು ಶುಭದಿನದಂದು ಬಂದನಾ ಶಿಷ್ಯ
ಮನುಜ ರೂಪವ ತಾಳ ಆ ವಾಸುದೇವ
ಸಕಲ ಸಜ್ಜನಕೆಲ್ಲ ಗುರು ವಾಯುದೇವ !
 
ಮಗನನ್ನು ಮನೆಗೆ ಮರಳಿಸುವ ವಿಫಲ ಪ್ರಯತ್ನ
 
ಮಧ್ಯಗೇಹರ ಮನೆಗೆ ಸುದ್ದಿ ಬಂದಿತೊಂದು:
"ವೈರಾಗ್ಯ ದೀಕ್ಷೆಯನ್ನು ತಳೆದಿಹ ಕುಮಾರ
ಸನ್ಯಾಸ ಸ್ವೀಕಾರ ಮಾಡಲಿಹನು
ಅಚ್ಯುತ ಪ್ರೇಕ್ಷರ ಅನುಚರನು ಅವನಿಗೆ
 
ಪುತ್ರವಿರಹದ ಶೋಕ ಭಟ್ಟರನು ಕಾಡಿರಲು
 
ರೂಪ್ಯ ಪಿ
 
ಪೀಠಾಲಯಕ ಒಡನೆ ಐತಂದರು
 
60 / ಶ್ರೀ ಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15