This page has not been fully proofread.

ಶ್ರೀ ಗುರುಭೋ ನಮ:
ನಾಲ್ಕನೆಯ ಸರ್ಗ
 
ಸನ್ಯಾಸ ನಿಶ್ಚಯ
 
ಗುರುಕುಲದ ವಾಸವನು ಇಂತು ಮುಗಿಸಿದ ಬಳಿಕ
 
ಸಲ್ಲೋಕ ದಯೆಯೆಂಬ ಅಮೃತದ ಆದ್ರ್ರತೆಯ
ಸಚ್ಛಾಸ್ತ್ರ ಚೋರರ ಅವನತಿಯ ಬಯಸಿದ
 
ಶ್ರೀ ಹರಿಯು ಅನುದಿನವೂ ವಾಸಿಸಲು ಆಶಿಸುವ
ಚಿತ್ತವೈಶಾಲ್ಯದ ಅಪ್ರತಿಮ ಪ್ರತಿಭೆಯ
ವಾಸುದೇವನು ಇಂತು ಆಲೋಚಿಸಿದನಂತೆ
 
"ವಿಷಯ ಸಂಗವನೆಲ್ಲ ತೊರೆಯಲೇ ಬೇಕು
ಶ್ರೀ ಹರಿಯ ಗುಣಗಳಲಿ ಆಗ ಉದಿಪುದು ಭಕ್ತಿ
ಹಿರಿಯ ಜನಗಳ ನಡತ ಪಾಮರರಿಗಾದರ್ಶ
ಸಹಜವಾಗಿಹುದೆನಗೆ ಪರಮಹಂಸಾಶ್ರಮ
ಅದಕೆಂದು ನಾನಿಂದು ಸ್ವೀಕರಿಸಿ ಘೋಷಿಸುವ
ವೈರಾಗ್ಯ ವೃತ್ತಿಯಲಿ ನನಗಿರುವ ಶ್ರದ್ಧೆಯನು"
 
ಹರಿಯ ನಿಂದಕರಲ್ಲಿ ನನಗಿಹುದು ರೋಷ
ಅವರನ್ನು ದಂಡಿಸಲು ಯೋಗ್ಯನಾಗಿಹೆ ನಾನು
ದಂಡಧಾರಣೆ ಬಿಟ್ಟು ಬೇರಿಲ್ಲ ಮಾರ್ಗ
ಆದರೀ ಕಾರ್ಯ ನನದಲ್ಲವಾಗಿದೆ
ಅವತರಿಸಿ ಬರಲಿಹಳು ಶ್ರೀ ಕೃಷ್ಣನನುಜೆ
 
ದುಷ ಸಂಹಾರವನು ದುರ್ಗೆ ಮಾಡುವಳು"
 
1
 
2
 
3