2023-02-21 18:39:14 by ambuda-bot
This page has not been fully proofread.
ಪ್ರಸ್ತಾವನೆ
ಇಂದಿಗೆ ಸುಮಾರು ಏಳುನೂರ ಐವತ್ತು ವರ್ಷಗಳಿಗೂ ಹಿಂದೆ, ಭಾರತದ
ಆಧ್ಯಾತ್ಮಿಕ ಆಕಾಶದಲ್ಲಿ ಕವಿದಿದ್ದ ಅಜ್ಞಾನ ತಿಮಿರದ ಮಬ್ಬುಗತ್ತಲಿನಲ್ಲಿ ಮಿಂಚಿನ
ಬಳ್ಳಿಯಂತೆ ಮಿಂಚಿದ ಮಹಾ ಚೇತನಶ್ರೀಮನ್ಮಧ್ವಾಚಾರ್ಯರು. ಅಪೌರುಷೇಯವಾದ
ವೇದಗಳ ಜ್ಞಾನ ಭಂಡಾರ ಕುರುಡರಿಗೆ ದೊರೆತ ರತ್ನರಾಶಿಯ ಹಾಗೆ ನಿಸ್ಸತ್ವವಾಗಿ
ನಿಶ್ಲೇಷ್ಟಿತಗೊಂಡಿದ್ದ ಅಂದಿನ ಕಾಲದಲ್ಲಿ ವೇದಗಳ ಸುಸ್ಪಷ್ಟ ಅರ್ಥವಿವರಣೆಗಳನ್ನು
ಸಮರ್ಥವಾಗಿ ನೀಡಲಾರದ, ಆದರೂ ತಮ್ಮನ್ನು ತಾವೇ ಸನಾತನ ಧರ್ಮ
ಪರಿಪಾಲನೆಯ ಅಧ್ವರ್ಯಗಳೆಂದು ಹೇಳಿಕೊಳ್ಳುತ್ತಿದ್ದ ಅನೇಕ "ಛದ್ಮ ದಾರ್ಶನಿಕರು"
ವೇದಾರ್ಥವನ್ನು ಪಲ್ಲಟಗೊಳಿಸಿ ಆಭಾಸ ಉಕ್ತಿಗಳ ಸರಮಾಲೆಯನ್ನೇ ಪೋಣಿಸಿ, ಅನೇಕ
ಅಮಾಯಕ ಮಂದಿಯನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸುತ್ತಿದ್ದರು.
ಬ್ರಹ್ಮಸೂತ್ರಗಳಂತಹ ಪವಿತ್ರ ಗ್ರಂಥಗಳಿಗೆ ತಮ್ಮ ಮನಬಂದಂತೆ ಭಾಷ್ಯಗಳನ್ನು ರಚಿಸಿ
ಈ ದಾರ್ಶನಿಕರು ವೈದಿಕ ಧರ್ಮವನ್ನು ಕಲುಷಿತಗೊಳಿಸುತ್ತಿದ್ದರು. ಭಗವಂತನ
ಸರ್ವೋತ್ತಮತ್ವವನ್ನು ಪ್ರಶ್ನಿಸಿ ''ಅಹಂ ಬ್ರಹ್ಮಾ'' ಮೊದಲಾದ ಉಪನಿಷ್ಪಾದಕಗಳ
ಅರ್ಥವನ್ನೇ ಪಲ್ಲಟಗೊಳಿಸಿ ಸಮಾಜದಲ್ಲಿ ಗೊಂದಲವನ್ನುಂಟು ಮಾಡುತ್ತಿದ್ದರು.
ಕೆಲವರಂತೂ, ಪವಿತ್ರ ವೇದೋಪನಿಷತ್ತುಗಳ ಪ್ರಾಮಾಣ್ಯವನ್ನೇ ಧಿಕ್ಕರಿಸಿ ಕೇವಲ ಐಹಿಕ
ಬದುಕನ್ನೇ ಗುರಿಯಾಗಿಟ್ಟುಕೊಂಡು, ವೈದಿಕ ಧರ್ಮವಾಹಿನಿಯ ಮುಖ್ಯ ಪ್ರವಹನದಿಂದ
ಸಿಡಿದೆದ್ದು ಹೊಸ ಹೊಸ ಮತಗಳನ್ನೇ ಸ್ಥಾಪಿಸಲು ಅನುವಾದರು.
ಹೀಗೆ, ಅಂದಿನ ಧಾರ್ಮಿಕ ಕ್ಷೇತ್ರದಲ್ಲಿ ಉಂಟಾದ ವೈಪರೀತ್ಯಗಳನ್ನು ತಡೆಗಟ್ಟಿ,
ಬ್ರಹ್ಮ ಸೂತ್ರಗಳು, ಉಪನಿಷತ್ತುಗಳು, ಭಗವದ್ಗೀತೆ ಮುಂತಾದ ಪವಿತ್ರ ಗ್ರಂಥಗಳ
ಪಾವಿತ್ರತೆಯನ್ನು ಸಂರಕ್ಷಿಸಿ, ಬ್ರಹ್ಮ ಜ್ಞಾನವನ್ನು ಸೂಕ್ತ ನೆಲೆಗಟ್ಟಿನಲ್ಲಿ ನಿಲ್ಲಿಸಲು,
ಇಳೆಯೊಳಗೆ ಇಳಿದು ಬಂದರು ಶ್ರೀಮನ್ಮಧ್ವಾಚಾರ್ಯರು (ಕ್ರಿ.ಶ. 1238 - 1318).
ಧರ್ಮ ಸಂಸ್ಥಾಪನೆಯ ಸಲುವಾಗಿ, ಇತರ ಯುಗಗಳಲ್ಲಿ ಮಾತ್ರ ಭಗವಂತನು ಸಾಕ್ಷಾತ್ತಾಗಿ
ಅವತರಿಸುವನು. ಹಾಗಾಗಿ, ಆತನ ಆಣತಿಯಂತೆ ಕಲಿಯುಗದಲ್ಲಿ ಸಾಕ್ಷಾತ್
ವಾಯುದೇವರೇ ಶ್ರೀಮನ್ಮಧ್ವಾಚಾರ್ಯರಾಗಿ ಅವತರಿಸಬೇಕಾಯಿತು. ತ್ರೇತೆಯಲ್ಲಿ
ಹನುಮನಾಗಿಯೂ, ದ್ವಾಪರದಲ್ಲಿ ಭೀಮಸೇನನಾಗಿಯೂ ಹಾಗೂ ಕಲಿಯುಗದಲ್ಲಿ
ಶ್ರೀಮದಾಚಾರ್ಯರಾಗಿಯೂ ಅವತರಿಸಿದ ಈ ಮಹಿಮರು ಜ್ಞಾನ ಬಲದೈಸಿರಿಗಳ
ಅದ್ಭುತ ಸಂಗಮ. ಚೇತನಾಚೇತನದ ಜಗಕೆಲ್ಲ ಒಡೆಯ ಈ ಜೀವೋತ್ತಮ. ಭಗವಂತನಲ್ಲಿ
ಅನನ್ಯ ಭಕ್ತಿಯನ್ನು ಪ್ರತಿಪಾದಿಸಿದ ಶ್ರೀ ಮಧ್ವರು ಭಕ್ತಿಪಂಥದ ಮಹಾಪೂರದ ರೂವಾರಿ.
ಈ ಮಹಾಮಹಿಮರ ಪರಂಪರೆಯಲ್ಲಿ ಬೆಳಗಿದ ತಾರೆಗಳೂ ಅನೇಕಾನೇಕ
(vii)