2023-02-21 18:39:21 by ambuda-bot
This page has not been fully proofread.
ಉಳಿದವರ ಹಿಡಿತದಲ್ಲಿ ಉಳಿಯದ ಓಡುವುದು
ಬಾಹುಗಳಲವರನ್ನು ಬಲವಾಗಿ ಹಿಡಿಯುವುದು
ಭಾರಗಳನೆತ್ತುವುದು ಹೂವ ಮಾಲೆಯ ತೆರದಿ
ಇಂಥ ಸಾಹಸವೆಲ್ಲ ಅತಿ ಸುಲಭ ಆತನಿಗೆ
ಆ ವಾಸುದೇವನ ಕಂಡು ಊರ ಜನರೆಲ್ಲ
"ಭೀಮಸೇನನ ಇವನು ಬೇರಲ್ಲ' ಎಂದರು
ಜಗಕೆಲ್ಲ ಗುರುವಾದ ವಾಸುದೇವನು ಹೀಗೆ*
ತನ್ನ ಕಾಲವನೆಲ್ಲ ಆಟದಲಿ ಕಳೆಯುತ್ತ
ಪಾಠ ಪ್ರವಚನದತ್ತ ನಿಶ್ಚಿಂತೆ ತೋರುತ್ತ
ತನ್ನ ಮನೆಯಲ್ಲಿಯೇ ಕಾಲ ಕಳೆಯುತಲಿರಲು
ಪೂಗವನ ವಂಶಸ್ಥ ವಾಸುದೇವನ ಗುರುವು
ಆತನಾ ನಡೆ ಕಂಡು ಮನನೊಂದರು
ಇಂತಿರಲು, ಒಮ್ಮೆ ವಾಸುದೇವನ ಗುರುವು
ಕುಪಿತರಾದರು ಅವನ ಚರ್ಯೆಯ ಕಂಡು
"ಅಧ್ಯಯನದಿ ಏಕಿಷ್ಟು ಅಶ್ರದ್ದೆ ನಿನಗೆ ?
ಸ್ನೇಹಿತರ ಒಡಗೂಡಿ ಪಠಿಸಲಾರೆಯ ನೀನು ?
ಏಕಿಷ್ಟು ಆಲಸ್ಯ ? ಈ ಉದಾಸೀನತೆ ?
ಇಂತೆಂದು ಕನಲಿದರು ಆ ಪರಮ ಗುರುಗಳು
"ಅರ್ಧ ಋಕ್, ಪಾದಗಳು, ಇತ್ಯಾದಿಯಾಗಿ
ಚರಣ ಚರಣಗಳಲ್ಲಿ ಪಠನ ಮಾಡುವ ರೀತಿ
ಸ್ವೀಕರಿಸದಾಗಿದೆ ಎನ್ನ ಮನ ಗುರುವೆ
ಶಿಷ್ಯನಾ ನುಡಿ ಕೇಳಿ ಕುಪಿತನಾದನು ಗುರುವು
"ಮಾತನಾಡುವೆ ನೀನು ಪಂಡಿತೋತ್ತಮನಂತ
ಈ ದಿನದ ಪಾಠದ ಉಳಿದ ಭಾಗವ ಹೇಳು"
ಮೂರನೆಯ ಸರ್ಗ / 51
48
49
50
51
ಬಾಹುಗಳಲವರನ್ನು ಬಲವಾಗಿ ಹಿಡಿಯುವುದು
ಭಾರಗಳನೆತ್ತುವುದು ಹೂವ ಮಾಲೆಯ ತೆರದಿ
ಇಂಥ ಸಾಹಸವೆಲ್ಲ ಅತಿ ಸುಲಭ ಆತನಿಗೆ
ಆ ವಾಸುದೇವನ ಕಂಡು ಊರ ಜನರೆಲ್ಲ
"ಭೀಮಸೇನನ ಇವನು ಬೇರಲ್ಲ' ಎಂದರು
ಜಗಕೆಲ್ಲ ಗುರುವಾದ ವಾಸುದೇವನು ಹೀಗೆ*
ತನ್ನ ಕಾಲವನೆಲ್ಲ ಆಟದಲಿ ಕಳೆಯುತ್ತ
ಪಾಠ ಪ್ರವಚನದತ್ತ ನಿಶ್ಚಿಂತೆ ತೋರುತ್ತ
ತನ್ನ ಮನೆಯಲ್ಲಿಯೇ ಕಾಲ ಕಳೆಯುತಲಿರಲು
ಪೂಗವನ ವಂಶಸ್ಥ ವಾಸುದೇವನ ಗುರುವು
ಆತನಾ ನಡೆ ಕಂಡು ಮನನೊಂದರು
ಇಂತಿರಲು, ಒಮ್ಮೆ ವಾಸುದೇವನ ಗುರುವು
ಕುಪಿತರಾದರು ಅವನ ಚರ್ಯೆಯ ಕಂಡು
"ಅಧ್ಯಯನದಿ ಏಕಿಷ್ಟು ಅಶ್ರದ್ದೆ ನಿನಗೆ ?
ಸ್ನೇಹಿತರ ಒಡಗೂಡಿ ಪಠಿಸಲಾರೆಯ ನೀನು ?
ಏಕಿಷ್ಟು ಆಲಸ್ಯ ? ಈ ಉದಾಸೀನತೆ ?
ಇಂತೆಂದು ಕನಲಿದರು ಆ ಪರಮ ಗುರುಗಳು
"ಅರ್ಧ ಋಕ್, ಪಾದಗಳು, ಇತ್ಯಾದಿಯಾಗಿ
ಚರಣ ಚರಣಗಳಲ್ಲಿ ಪಠನ ಮಾಡುವ ರೀತಿ
ಸ್ವೀಕರಿಸದಾಗಿದೆ ಎನ್ನ ಮನ ಗುರುವೆ
ಶಿಷ್ಯನಾ ನುಡಿ ಕೇಳಿ ಕುಪಿತನಾದನು ಗುರುವು
"ಮಾತನಾಡುವೆ ನೀನು ಪಂಡಿತೋತ್ತಮನಂತ
ಈ ದಿನದ ಪಾಠದ ಉಳಿದ ಭಾಗವ ಹೇಳು"
ಮೂರನೆಯ ಸರ್ಗ / 51
48
49
50
51