2023-02-21 18:39:21 by ambuda-bot
This page has not been fully proofread.
ಅಂತಿಂಥದಲ್ಲ ವಾಸುದೇವನ ಪಾದ !
ಸಾಕ್ಷಾತ್ತು ಗರುಡನ ಬಾಯಿಯಂತಹ ಪಾದ !
ಆ ಪಾದಕ್ಕೆ ಬಾಯಿಟ್ಟ ಮಣಿಮಂತನ ಪಾಡು
ಗರುಡ ತುಂಡವ ಹೊಕ್ಕ ಹಾವಿನಂತಾಯ್ತು
ರಕ್ಕಸನು ತಕ್ಷಣವೇ ಸಾವನಪ್ಪಿದ ಕಂಡು
ಸುರರು ಕೊಂಡಾಡಿದರು ವಾಸುದೇವನ ಮಹಿಮ
ಜಗದ್ಗುರುವಿನ ಗುರುಕುಲವಾಸ
ಯಾವ ದೇವನ ದಿವ್ಯ ಪಾದಧೂಳಿಗಳನ್ನು
ಶ್ರೀ ರುದ್ರ, ದೇವೇಂದ್ರ, ದೇವಗುರುಗಳು ಎಲ್ಲ
ಶಿರದಲ್ಲಿ ಸ್ವೀಕರಿಸಿ ಧನ್ಯರಾಗುವರೋ
ಆ ವಾಯುದೇವನು ಇಂದು ಗುರುಪದ ನಮಿಸುತ್ತ
ಮನುಜ ಸಹಜದ ಕರ್ಮ ಶ್ರದ್ದೆಯಲ್ಲಿ ಮಾಡುತ್ತ
ವೇದಾದಿ ವಿದ್ಯೆಗಳ ಅಧ್ಯಯನ ಮಾಡಿದನು
ಅಂಗೈಯಲಾಡಿಸುವ ಕಂದುಕದ ಪರಿಯಲ್ಲಿ
ಸಕಲ ಶಾಸ್ತ್ರಗಳಿವಗೆ ಕರತಲಾಮಲಕ
ಎಲ್ಲವೂ ಸುಸ್ಪಷ್ಟ ಎಲ್ಲವೂ ಅತಿ ಸರಳ !
ಸಾಕ್ಷಾತ್ತು ವಾಯುವಿನ ಅವತಾರ ಈ ಹಸುಳೆ !
ಆದರೂ ಸಾಮಾನ್ಯ ಜನರಂತೆ ಅಧ್ಯಯನ !
ವಾಸುದೇವನ ಮನದಿ ಶ್ರೀ ಹರಿಯೇ ನಿಂದಿರುವ
ತನಗಿಂತ ಹಿರಿಯರು, ತನಗಿಂತ ಕಿರಿಯರು
ಎಲ್ಲ ವಟುಗಳ ಕೂಡಿ ಆ ವಾಸುದೇವನು
ಅಧ್ಯಯನದ ನಂತರ, ಬಿಡುವಿನ ವೇಳೆಯಲಿ
ದೂರ ದೂರದ ಸ್ಥಳಕೆ ಪಯಣ ಬೆಳಸುತ್ತ
ವಿಹರಿಸಿದ ಸುಖಿಸುತ್ತ, ಚತುರ ಮಿತ್ರರ ಸಹಿತ
ಆಟ, ಓಟಗಳಲ್ಲಿ ಭಾಗವಹಿಸುತ್ತ
ಮೂರನೆಯ ಸರ್ಗ / 49
40
42
43
ಸಾಕ್ಷಾತ್ತು ಗರುಡನ ಬಾಯಿಯಂತಹ ಪಾದ !
ಆ ಪಾದಕ್ಕೆ ಬಾಯಿಟ್ಟ ಮಣಿಮಂತನ ಪಾಡು
ಗರುಡ ತುಂಡವ ಹೊಕ್ಕ ಹಾವಿನಂತಾಯ್ತು
ರಕ್ಕಸನು ತಕ್ಷಣವೇ ಸಾವನಪ್ಪಿದ ಕಂಡು
ಸುರರು ಕೊಂಡಾಡಿದರು ವಾಸುದೇವನ ಮಹಿಮ
ಜಗದ್ಗುರುವಿನ ಗುರುಕುಲವಾಸ
ಯಾವ ದೇವನ ದಿವ್ಯ ಪಾದಧೂಳಿಗಳನ್ನು
ಶ್ರೀ ರುದ್ರ, ದೇವೇಂದ್ರ, ದೇವಗುರುಗಳು ಎಲ್ಲ
ಶಿರದಲ್ಲಿ ಸ್ವೀಕರಿಸಿ ಧನ್ಯರಾಗುವರೋ
ಆ ವಾಯುದೇವನು ಇಂದು ಗುರುಪದ ನಮಿಸುತ್ತ
ಮನುಜ ಸಹಜದ ಕರ್ಮ ಶ್ರದ್ದೆಯಲ್ಲಿ ಮಾಡುತ್ತ
ವೇದಾದಿ ವಿದ್ಯೆಗಳ ಅಧ್ಯಯನ ಮಾಡಿದನು
ಅಂಗೈಯಲಾಡಿಸುವ ಕಂದುಕದ ಪರಿಯಲ್ಲಿ
ಸಕಲ ಶಾಸ್ತ್ರಗಳಿವಗೆ ಕರತಲಾಮಲಕ
ಎಲ್ಲವೂ ಸುಸ್ಪಷ್ಟ ಎಲ್ಲವೂ ಅತಿ ಸರಳ !
ಸಾಕ್ಷಾತ್ತು ವಾಯುವಿನ ಅವತಾರ ಈ ಹಸುಳೆ !
ಆದರೂ ಸಾಮಾನ್ಯ ಜನರಂತೆ ಅಧ್ಯಯನ !
ವಾಸುದೇವನ ಮನದಿ ಶ್ರೀ ಹರಿಯೇ ನಿಂದಿರುವ
ತನಗಿಂತ ಹಿರಿಯರು, ತನಗಿಂತ ಕಿರಿಯರು
ಎಲ್ಲ ವಟುಗಳ ಕೂಡಿ ಆ ವಾಸುದೇವನು
ಅಧ್ಯಯನದ ನಂತರ, ಬಿಡುವಿನ ವೇಳೆಯಲಿ
ದೂರ ದೂರದ ಸ್ಥಳಕೆ ಪಯಣ ಬೆಳಸುತ್ತ
ವಿಹರಿಸಿದ ಸುಖಿಸುತ್ತ, ಚತುರ ಮಿತ್ರರ ಸಹಿತ
ಆಟ, ಓಟಗಳಲ್ಲಿ ಭಾಗವಹಿಸುತ್ತ
ಮೂರನೆಯ ಸರ್ಗ / 49
40
42
43