This page has not been fully proofread.

ತಪದ ನಿಧಿಯೆನಿಸಿದ್ದ ಮಧ್ಯಗೇಹರು ಅಂದು
ನಷ್ಟಗೊಂಡಾ ನಿಧಿಯ ಮತ್ತೆ ಪಡೆದವರಂತೆ
 
ಸತಿಸುತರ ಒಡಗೂಡಿ ಮನೆಗೆ ಮರಳಿದರು
ವಾಸುದೇವನ ಮೊಗವು ಬಾಲಸೂರ್ಯನ ಹಾಗೆ
ಆ ಮೊಗವ ನೋಡಿ ಸಜ್ಜನರ ಮುಖಕಮಲ
ಅರಳಿದವು ಉದಯಿಸಿದ ರವಿಯ ಕಂಡಂತೆ
 
ವಿಮಾನಗಿರಿಯಲ್ಲಿ ವಾಸುದೇವ
 
ಪಾಜಕದ ಬಳಿಯೊಂದು ವಿಮಾನಗಿರಿಯುಂಟು
ದುರ್ಗಮವು ಆ ಗಿರಿಯು ಹಿಮಗಿರಿಯ ಪರಿಯಲ್ಲಿ
ಊರ ಜನರಾರೂ ಗಿರಿಯ ಕಡೆ ಮೊಗವಿಡರು
 
ಇಂತಹ ಬೆಟ್ಟದಲ್ಲಿ ವಾಸುದೇವನು ಮಾತ್ರ
ನಿರ್ಭಯದಿ ಸಂಚರಿಸುವನೇಕಾಂಗಿಯಾಗಿ
ದುರ್ಗೆಯ ಶ್ರೀರಕ್ಕೆ ಸತತವಿಹುದವಗೆ
 
ಭಾರತೀಪತಿಯ ಅಕ್ಷರಾಭ್ಯಾಸ
 
ಮಾತುಗಳದೆಲ್ಲದಕ್ಕೂ ಮಾತೆ ಭಾರತಿಯು
ಅಕ್ಷರದ ರಾಜ್ಯಕ್ಕೆ ಅಕ್ಕರೆಯ ಅಭಿಮಾನಿ
ಇಂಥ ಭಾರತಿಗೀತ ಒಡೆಯನಿವನು
ಈ ವಾಸುದೇವನಿಗೆ ಅಕ್ಷರಾಭ್ಯಾಸವೆ ?
ಬಾಲಕನ ಮಹಿಮೆಯನ್ನು ಅರಿಯದಾ ವಿಪ್ರರು
ಕಲಿಸಿದರು ಆತನಿಗೆ ಓದು ಬರಹ
 
ವಾಸುದೇವನ ಪ್ರತಿಭೆ ಅಪ್ರತಿಮವಹುದು
ಭಾರತೀರಮಣನಿಗೆ ಕಲಿಸುವವರಾರು ?
 
"ನಿನ್ನೆ ಬರೆದಿಹುದನ್ನೆ ಇಂದಿಗೂ ಬರೆದಿರುವೆ
ನಿನ್ನೆ ಕಲಿತುದುದನ್ನೆ ಮತ್ತೆ ಕಲಿಯಲೆ ನಾನು ?"
ಬಾಲಕನು ಉಸುರಿದಾ ನುಡಿಯನ್ನು ಕೇಳಿ
ಸಂತಸದಿ ಬೀಗಿದನು ಮಧ್ಯಗೇಹ
 
ಮೂರನೆಯ ಸರ್ಗ / 43
 
16
 
17
 
18
 
19