This page has not been fully proofread.

ತಂದೆಯಾಡಿದ ಮಾತನಾಲಿಸಿದ ಹಸುಳೆ
ತಾವರೆಯ ಕಂಗಳಿನ ಆ ವಾಸುದೇವ
 
ಮುದಗೊಳಿಪ ತೊದಲು ನುಡಿಗಳಿಂತಂದು ನುಡಿದ
"ಮದುವೆಯ ಮನೆಯಿಂದ ಹೊರಹೊರಟ ನಾನು
 
ಕುಡುವೂರ ಸ್ವಾಮಿಯು ಎಡಬಿಡದೆ ಜೊತೆಯಿದ್ದ
ಅಲ್ಲಿಂದ ಮುಂದೆಯೂ ಶ್ರೀಹರಿಯೇ ಸಂಗಾತಿ"
 
"ಕುಡುವೂರ ಸ್ವಾಮಿಗೆ ನಮನವನ್ನರ್ಪಿಸಿದೆ
ಮುಂದಕ್ಕೆ ಹೊರಟೆ, ತಾಳೆಕುಣಿ ಕಡೆಗೆ
ತಾಳೆಕುಡೆಯಿಂದ ಪೂರ್ವಕ್ಕೆ ಸರಿದು
ಚಂದ್ರಮೌಳೇಶ್ವರನ ಮಂದಿರಕೆ ಬಂದೆ
ಆತನೊಳಗಿರುವ ಶ್ರೀಹರಿಗೆ ವಂದಿಸಿ
ಮುಂದುವರಿದೆನು ನಾನು ಶ್ರೀಹರಿಯ ಕೂಡ
 
"ಮುಂದರಿಸಿ ಪಯಣವನು ಹಲವಾರು ಮೈಲಿ
ಮೂಡಲಾಲಯ ಸ್ವಾಮಿಯಂತರ್ಯಾಮಿ
ಕಮಲನಾಭನ ಕೂಡ ಇಲ್ಲಿ ಬಂದೆ
ಸೇವಿಸಿದೆ ಶ್ರೀ ಹರಿಯ ಬಲು ಭಕ್ತಿಯಿಂದ
 
ಇಂತಂದು ನುಡಿದಾ ಮಗುವ ಮಾತನು ಕೇಳಿ
 
ವಿಸ್ಮಯದಿ ಜನರೆಲ್ಲ ಬೆರಗಾಗಿ ನೋಡಿದರು
 
"ಬಂಧು ಜನರನು ತೊರೆದು ಒಬ್ಬೊಂಟಿಯಾಗಿ
ವಿವಿಧ ಭೂತಗಳಿರುವ ಭೀಕರ ಪ್ರಾಂತದಲ್ಲಿ
ಏಕಾಂಗಿಯಾಗಿಯೇ ಚಲಿಸುವನು ಬಾಲ
ಅಲ್ಪ ಭಾಗ್ಯನು ನಾನು ! ನನಗಾರು ಗತಿಯಿಲ್ಲ
ಕರುಣಾಳು ಸ್ವಾಮಿಯೇ ಬಾಲಕನ ಪಾಲಿಸು
ಇಂತು ಪ್ರಾರ್ಥಿಸಿ ವಿಪ್ರ ಹರಿಗೆ ನಮಿಸಿದನು
 
42 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15