This page has not been fully proofread.

ಕಾಣದಾದರು ಮಗನ, ಮಧ್ಯಗೇಹರು ಇತ್ತ
ಮಗನ ಮಮತೆಯ ಮೋಹ ಅವರನಾವರಿಸಿತ್ತು
ದಾರಿಯಲ್ಲಿ ನಡೆದರು ಪರಿತಾಪ ಪಡುತ
 
ಹಿಂಬಾಲಿಸಿದರವರು ಮಗುವ ಹೆಜ್ಜೆಯ ಗುರುತ
"ಮಗುವ ಕಂಡಿರಾ ನೀವು ?" ಎಂಬ ಪ್ರಶ್ನೆಯ ಹೊತ್ತು
ಹೆಜ್ಜೆ ಹೆಜ್ಜೆಗೂ ಅವರು ದಾರಿಗರ ಕೇಳಿದರು.
 
ಮಗುವ ಮುಖವೆಂಬೊಂದು ಕಮಲದ ಪುಷ್ಪವನ್ನು
ಮಧ್ಯಗೇಹರು ಎಂಬ ದುಂಬಿ ಅರಸಿತ್ತು
ಪುರಜನರು ದುಂಬಿಗೆ ಗಾಳಿಯಂತಾದರು
ಕಮಲಪುಷ್ಪದ ಇರವು ಅವರಿಂದ ತಿಳಿಯಿತು
ಅಂತ್ಯದಲ್ಲಿ ದೊರಕಿತ್ತು ಮಧುಕರನಿಗೆ
 
ನಗೆಯಿಂದ ಅರಳಿದ ಮಗುವ ಮುಖಕಮಲ
 
ಮಗುವ ವಿರಹದ ನೋವು ಕಣ್ಣೀರ ತಂದಿತ್ತು
ಅಮಂಗಲವ ಸಾರುವ ದುಃಖಾಶುವನ್ನು
ಮಧ್ಯಗೇಹರು ಒಡನೆ ತೊಡೆದು ಹಾಕಿದರು
 
ಪುತ್ರದರ್ಶನ ಭಾಗ್ಯ ಸಂತಸವ ತಂದಿತ್ತು
ಆನಂದಬಾಷವನೂ ಅವರು ನಿಗ್ರಹಿಸಿ
ವಾಸುದೇವನ ಕುರಿತು ಹೀಗೆಂದರು
 
"ಸರಿಯಾಗಿ ಅರುಹು, ಮಗು, ನನಗೆಲ್ಲವನ್ನೂ
ಬಂಧು ಜನರನ್ನು ತೊರೆದು ಒಬ್ಬೊಂಟಿಯಾಗಿ
ಏಕೆ ಬಂದಿಹೆ ನೀನು ಇಷ್ಟೊಂದು ದೂರ ?
ಏನು ಅರಿಯದ ಮೂರು ವರ್ಷದ ಹಸುಳೆ, ಶಿಶುವು
 
ಹೇಗೆ ಕ್ರಮಿಸಿದೆ ನೀನು ಇಷ್ಟೊಂದು ದೂರ ?
 
ನಿನ ಜೊತೆ ಯಾರಿದು ನೆರವ ನೀಡಿದರು ?"
 
ಮೂರನೆಯ ಸರ್ಗ / 41
 
10
 
11