This page has not been fully proofread.

ಹುರುಳಿ ತಿಂದ ಪ್ರಸಂಗ
 
ತಾಯಿ ಇನ್ನೊಂದೆಡೆಗೆ ಹೋಗಬೇಕಾಯೊಮ್ಮೆ
ಸ್ತನಪಾನ ಸಾಕಷ್ಟು ಕುಡಿಸಿ ಆ ಮಗುವಿಗೆ
ತನ್ನ ಪುತ್ರಿಯ ಕೈಗೆ ಶಿಶುವನೊಪ್ಪಿಸಿದಾಕೆ
ಮಗುವ ಜಾಗ್ರತೆಯಿಂದ ನೋಡಿಕೊಳ್ಳೆಂದಳು
ಜಗವ ಸಲಹುವ ಮಗನ ಮಗಳು ಸಲಹುವ ?
ಮೂಢನಂಬಿಕೆಯಾಯ್ತು ಮುಗ್ಧತಾಯಿಯದು
 
ತಾಯಿ ಮರೆಯಾದ ತಕ್ಷಣವೇ ಮಗುವು
ಅಳುವ ಪ್ರಾರಂಭಿಸಿತು ಮತ್ತೆ ಮತ್ತೆ
 
ಮುಗುದ ಆ ಬಾಲಕಿ ಮಾಡಿಯಾಳೇನು ?
ಆಸ್ಪಷ್ಟ ನುಡಿಯಿಂದ ರಮಿಸಿದಳು ಶಿಶುವ
"ಅಳಬೇಡ, ಅಳಬೇಡ ಕಂದಯ್ಯ ನೀನು
ಬೇಕಾದುದಲವನು ತಾಯಿ ತರಲಿಹಳು
 
ಮಗುವಿನಾ ಅಳುವೇನೂ ಹೆಚ್ಚುತ್ತ ಹೋಯಿತು
ತಾಯ ಬರುವಿಕೆಯ ಸೂಚನೆಯೇ ಇಲ್ಲ
ವ್ಯಥೆಗೊಂಡಳಾ ಬಾಲಿ ದಾರಿಗಾಣದೆ ಹೋಗಿ
 
ತಾಯಿ ಬರುವಲ್ಲಿ ಏಕಿಂತು ತಡವೋ! ಎಂದು ಚಿಂತಿಸಿದಳು
 
ಶಿಶುವನ್ನು ಕೈಯಲ್ಲಿ ಎತ್ತಿಕೊಂಡಾ ಬಾಲೆ
ತಾಯ ಬರವನೇ ಎದುರು ನೋಡಿದಳು
 
ತಾಯ ಹಾದಿಯ ನೋಡಿ ಬೇಸತ್ತ ಕನ್ಯ
 
ಮುಂದೇನು ಮಾಡಲೂ ಅರಿಯದಾದಾಗ
 
ಕುಪ್ಪಾಧೆಯಿರಬಹುದೆಂದು ಶಂಕೆ ತಾಳಿದಳು
ಉಷ್ಣರೋಗವು ಶಿಶುವ ಕಾಡಬಹುದೆಂದಂಜಿ
ತಣ್ಣನೆಯ ಹಾಲನ್ನೇ ಊಡುತ್ತಿದ್ದಳು ತಾಯಿ
ದಿಕ್ಕುತೋರದ ಬಾಲೆ, ಬೆಂದ ಹುರುಳಿಯನುಣಿಸಿ, ಶಿಶುವ ರಮಿಸಿದಳು
 
30 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
35
 
36
 
37
 
38