This page has not been fully proofread.

ಭೂತನಿಗ್ರಹ ಪ್ರಸಂಗ
 
ಅಂಜಿಕೆಯನೇ ಅರಿಯದ ಅಪರೂಪದಾ ಋವು !
 
ಅರಳಿರುವ ಕಣ್ಣುಗಳು ತುಂಬು ಕಾಂತಿಯವು !
ಅತ್ಯಂತ ದುರ್ಲಭದ ಅಂಥ ಶಿಶುರತ್ನವನು
ಮಧ್ಯಗೇಹರು ಒಯ್ದು ಕುಲದೇವರೆಡೆಗೆ
ಅರ್ಪಿಸಿದರಾ ಶಿಶುವ ಸ್ವಾಮಿಪಾದದ ಅಡಿಗೆ
ಶ್ರೀ ಹರಿಯ ಸನ್ನಿಧಿಗೆ ವಾಯುದೇವರ ಕೊಡುಗೆ
 
ರಜತ ಪೀಠಾ ಪುರದ ಅಧಿವಾಸಿ ಹರಿಗೆ
ನಮಿಸಿದರು ಮಧ್ಯಗೇಹರು ಭಕ್ತಿಯಲ್ಲಿ ಅಂದು
ಪ್ರಾರ್ಥನೆಯ ಗೈದರು ಭಯ ಭಕ್ತಿಯಿಂದ
ಬಾಲಕಗೆ ಸಂಪದವು ಲಭಿಸಲೆಂದು
ಪರಿವಾರ ಜನರೊಡನೆ ಶಿಶುವ ಕೈಯಲ್ಲಿ ಹೊತ್ತು
ತೆರಳಿದರು ಪಾಜಕಕೆ ನಡುರಾತ್ರಿಯಲ್ಲ
 
ನಡುರಾತ್ರಿಯಲ್ಲವರು ದಾರಿಯನ್ನು ಸವೆಸಿದರು
ದಟ್ಟ ಕಾನನದಲ್ಲಿ ಭೂತವೊಂದಾಗ /
ಪೀಡಿಸಿತು ಪರಿವಾರದೋರ್ವನನ್ನು
ಕಾರಿರುಳ ಮಧ್ಯದಲ್ಲಿ ರಕ್ತಕಾರಿದನವನು
ಅದ ನೋಡಿ ಹೀಗೆಂದ ಪರಿವಾರದಲ್ಲೊಬ್ಬ
"ಭೂತ ಪೀಡಿಸಲಿಲ್ಲ ಮಗುವನ್ನು ಏಕೋ ?"
 
ಭೂತಪೀಡಿತನಲ್ಲಿ ವ್ಯಕ್ತವಾಯಿತು ಭೂತ
ಆವಿಷ್ಟನಾದವನು ಎದ್ದು ಕೂತೆಂದ
"ಈ ಕಾನನದಿ ನಾನೀಗ ವಿಹರಿಸುತ್ತಿದೆನು
ಅರ್ಧ ರಾತ್ರಿಯೊಳಲ್ಲಿ ನೀವೇಕೆ ಬಂದಿರಿ ?
ಸಂಹರಿಸಿ ಬಿಡುತ್ತಿದ್ದೆ ನಿಮ್ಮೆಲ್ಲರನ್ನೂ
 
ರಕಣೆಯ ನೀಡಿದನು ಶಿಶುವವನು ಲೋಕೇಶ
 
ಎರಡನೆಯ ಸರ್ಗ / 29
 
31
 
32
 
3.3
 
34