This page has not been fully proofread.

ಶ್ರೀ ಮಧ್ಯಾಮಾರ
ವೃದ್ಧಿಯಾಯಿತು ಗರ್ಭ, ಶುಕ್ಲಚಂದ್ರನ ತೆರದಿ
ಪ್ರಸವಕಾಲವು ಅಂದು ಸನಿಹವಾದಾಗ
ಧರೆಗಿಳಿದು ಬಂದರು, ಶ್ರೀ ವಾಯುದೇವರು
ಶ್ರೀ ಹರಿಯ ಆಣತಿಯ ಶಿರದಲ್ಲಿ ಧರಿಸಿ
ಉಡುಪಿಯಲ್ಲಿನ ಊರ ದೇವರಿಗೆ ನಮಿಸಿ
ತೆರಳಿದರು ಭಟ್ಟನ ಮನೆಯತ್ತಲವರು
 
ಸಕಲ ಸಲ್ಲಕ್ಷಣದಿ ಶೋಭಿಸುವ ಪುರವನ್ನು
ಪರಮಸುಂದರವಾದ ಪುರದ ಮಂದಿರವನ್ನು
ರಾಜ ಅರಿಯನ್ನು ಹೊಡೆದಟ್ಟ ಹೊಗುವಂತೆ
ಶ್ರೀ ಹರಿಯ ಸುಂದರ ಮಂದಿರವ ಹೋಲುವ
ಗರ್ಭವನ್ನು ಹೊಕ್ಕರು ಶ್ರೀ ವಾಯುದೇವರು
ಆಗಲೇ ನೆಲೆಸಿದ್ದ ಜೀವನನು ಹೊಡೆದಟ್ಟ
 
"ಬುವಿಯಲ್ಲಿ ಅವತರಿಸಿ ಬಿಟ್ಟಿಹರು ಇಂದು
ವಾಯುದೇವರ ಭವ್ಯ ಅವತಾರವಾಗಿಹುದು
ಮುದಗೊಳಲಿ ಸಜ್ಜನರು, ದುಃಖಸಲಿ ದುರ್ಜನರು
ಹೀಗೆಂದು ಸಾರುವುದೊ ಎಂಬಂಥ ಧ್ವನಿಯಿಂದ
ದೇವ ದುಂದುಭಿಗಳೆಲ್ಲ ಮೊಳಗಿದಾಗ
ಆ ಧ್ವನಿಯು ಮಾನವರ ಕಿವಿಗಳಿಗೂ ಬಿತ್ತು
 
ಅನಂತಾಸನನನ್ನು ಆರಾಧಿಸಿದ ಬಳಿಕ
ಮನೆಗೆ ಮರಳುತ್ತಿದ್ದ ಮಧ್ಯಗೇಹರು ಅಂದು
ಕೇಳಿದರು ದುಂದುಭಿಯ ಧ್ವನಿಯನ್ನು ಆಗ
ಪುತ್ರೋತ್ಸವದ ಸಂಗತಿಯ ಆಗಲೇ ಅರಿತವರು
ನಲಿದಾಡಿ ಹೋದರು ಆನಂದದಿಂದ
 
ಪರೋಕ್ಷಜ್ಞಾನವೂ ಇಷ್ಟಸಾಧನವೆಂದು ಅರಿತರವರಾಗ
 
ಎರಡನೆಯ ಸರ್ಗ / 27
 
24
 
25
 
26
 
27