2023-02-21 18:39:14 by ambuda-bot
This page has not been fully proofread.
ಅಭಿನಂದನ
ಶ್ರೀಯುತ ಇ. ಡಿ. ನರಹರಿಯವರು ನನಗೆ ಪರಿಚಯವಾಗಿ ಹತ್ತು
ವರುಷಗಳಾದವು. ಹತ್ತು ವರುಷಗಳ ಅವರ ಒಡನಾಟದಲ್ಲಿ ಅವರ ಬಗ್ಗೆ ನನಗೆ ತಿಳಿದದ್ದು
ಸ್ವಲ್ಪವೇ. ಇವರೊಬ್ಬ ಗುಪ್ತಗಾಮಿಯಾದ ಸರಸ್ವತೀ ನದಿಯಂತ, ಮೇಲ್ನೋಟಕ್ಕೆ
ನಾಸ್ತಿಕರಂತೆ ಕಾಣುವ ಇವರು ಒಳ ಹೃದಯದಲ್ಲಿ ಪರಮ ಆಸ್ತಿಕರು. ಶ್ರೀಮತಿ ಸರಸ್ವತೀ
ಬಾಯಿಯವರ ಪತಿಯಾದ ಇವರು ಸರಸ್ವತಿಯನ್ನು ಒಲಿಸಿಕೊಂಡಿದ್ದಾರೆ. ಅತಿ
ಶ್ರೀಮಂತಿಕೆ, ಸಜ್ಜನಿಕೆಯಿಂದ ಕೂಡಿರುವ ನರಹರಿಯವರು ಅವರ ಹೆಸರಿಗೆ ತಕ್ಕಂತ ತಮಗೆ
ಹಿಡಿಸದ ವಿಷಯಗಳಲ್ಲಿ ಸಿಂಹನಂತೆ ಕೆರಳುವುದನ್ನು ನಾನು ಕಂಡಿದ್ದೇನೆ. ಹಾಗೆಯೆ
ನರರೂಪನಾದ ಅರ್ಜುನನಂತೆ ವಾಗ್ದಾಣಗಳನ್ನು ಸುರಿಸಿದ್ದನ್ನೂ ಕಂಡಿದ್ದೇನೆ. ಆದರೆ
ಇದೆಲ್ಲವನ್ನೂ ಮೀರಿ ಅವರ ಹೃದಯಾಂತರಾಳದಲ್ಲಿ ಹುದುಗಿರುವ ಮಾಧ್ವದೀಕ್ಷೆಯನ್ನೂ
ನೋಡಿರುತ್ತೇನೆ. ಇವರು ಲೌಕಿಕದಲ್ಲಿದ್ದು ಜಿಯಲಾಜಿಕಲ್ ಡಿಪಾರ್ಟಮೆಂಟಿನಲ್ಲಿ
ಉನ್ನತ ಹುದ್ದೆಯಲ್ಲಿ ಕೆಲಸಮಾಡಿ ನಿವೃತ್ತರಾಗಿ ಯಲಹಂಕ ಉಪನಗರದಲ್ಲಿ ಸ್ವಂತ ಮನೆ
ಮಾಡಿಕೊಂಡು ಹರಿವಾಯುಗುರುಗಳ ಸೇವಾ ಮಾಡುತ್ತಾ ಉಳಿದಿರುವ ತಮ್ಮ
ಅಮೂಲ್ಯವಾದ ಆಯುಷ್ಯವನ್ನು ಸಾರ್ಥಕಗೊಳಿಸಿಕೊಳ್ಳುತ್ತಿದ್ದರು. ಇವರಲ್ಲಡಗಿರುವ
ಮಾಧ್ವದೀಕ್ಷೆ ಇವರಿಂದ ಹರಿವಾಯು ಸ್ತುತಿಯ ಕನ್ನಡ ಹಾಗೂ ಆಂಗ್ಲ ಭಾಷೆಗಳ
ರಚನೆಯನ್ನು ಅತ್ಯಂತ ರಮಣೀಯವಾಗಿ ಮಾಡಿಸಿದೆ. ಈ ಕೃತಿಯನ್ನು ಸಂಗೀತಕ್ಕೂ
ಅಳವಡಿಸಿ ಪ್ರಸಿದ್ಧ ಸಂಗೀತಗಾರರಿಂದ ಹಾಡಿಸಿ ಕೇಳಿಸಿದ್ದಾರೆ.
ಈಗ ಶ್ರೀಮನ್ನಾರಾಯಣ ಪಂಡಿತಾಚಾರ್ಯರಿಂದ ರಚಿತವಾದ ಸಕಲ
ಸಜ್ಜನರಿಗೂ ಪರಮ ಮಂಗಳದಾಯಕವಾದ 'ಶ್ರೀಸುಮಧ್ವವಿಜಯದ'' ಕನ್ನಡ
ಪದ್ಯಾನುವಾದವನ್ನು ಸರಳವೂ ಸುಲಭವೂ ಆದ ಕನ್ನಡದಲ್ಲಿ ಪೂರ್ಣಗೊಳಿಸಿದ್ದಾರೆ.
ಛಲಬಿಡದ ತ್ರಿವಿಕ್ರಮನಂತೆ 3-4 ವರ್ಷಗಳ ಸತತ ಪರಿಶ್ರಮದ ಪ್ರಯತ್ನದಿಂದ ಈ
ಕೃತಿಯನ್ನು ಧೃತಿಗೆಡದೆ (ಶ್ರೀಮತಿ ಸರಸ್ವತಿಯವರು ಈ ಸಂದರ್ಭದಲ್ಲಿ
ಇವರನ್ನಗಲಿದರೂ) ಮಾಡಿ ಮುಗಿಸಿದ್ದಾರೆ. ಈ ಕೃತಿಯನ್ನು ನಾನು ಆಮೂಲವಾಗಿ
ನೋಡಿ ಆನಂದಿಸಿದ್ದೇನೆ. ಬಹಳ ಸ್ಪುಟವಾಗಿ ಮೂಲಗ್ರಂಥಕರ್ತರ ಅಭಿಪ್ರಾಯಕ್ಕೆ ಚ್ಯುತಿ
ಬರದಂತೆ ಅನುವಾದ ಮಾಡಿದ್ದಾರೆ. ಸಂಸ್ಕೃತವನ್ನು ಓದಲಿಕ್ಕೆ ಬಾರದಿದ್ದವರೂ ಕೂಡಾ
'ಶ್ರೀ ಸುಮಧ್ವವಿಜಯ'ದ ಸುಧಾರಸವನ್ನು ಇವರ ಈ ಅನುವಾದದಿಂದ
ಆಸ್ವಾದಿಸಬಹುದು. ಇಂಥಹ ಇ. ಡಿ. ನರಹರಿಯವರಿಗೆ ಶ್ರೀ ನರಹರಿಯು ಇನ್ನೂ
ಹೆಚ್ಚು ಆಯುಸ್ಸನ್ನು ಕೊಟ್ಟು ಇವರಿಂದ ಇದೇ ರೀತಿ ಸೇವೆಪಡೆಯಲಿ.
ಯಲಹಂಕ ಉಪನಗರ
ಬೆಂಗಳೂರು - 560 064
ಇತಿ ಅಭಿನಂದನೆಗಳು,
ಬಿ. ಶ್ರೀಪತಿ ಆಚಾರ್