This page has not been fully proofread.

ಅನುವಾದಕನ ನುಡಿ :
 
ಆನಂದ ತೀರ್ಥರ ಅಪರಿಮಿತ ಮಹಿಮೆಯನು
ಪಾಡಿ ಪೊಗಳುವ ಭಾಗ್ಯ ಈ ಮಂದಮತಿಗಾಯ್ತು
ನಾರಾಯಣಾರ್ಯರ ಮೇರುಗಿರಿ ಕಾವ್ಯವನು
ಕನ್ನಡದಿ ನುಡಿಯುವ ಪುಣ್ಯ ಎನಗಾಯ್ತು
ನರಹರಿಯು ಕರುಣಿಸಿಹ ಸರಸತಿಯ ಭಿಕ್ಷೆಯನ್ನು
ಅನುಗಾಲ ಸೇವಿಸುತ ನಲಿವ ಮನವೆನದಾಯ್ತು
 
ಗಗನದೆತ್ತರದಲ್ಲಿ ಸೂರ್ಯನಿಗೂ ಮಿಗಿಲಾಗಿ
ಬೆಳಗಿರಲಿ ಪ್ರಜ್ವಲಿಸಿ ಮಧ್ವಮತ ದೀಪ
 
ಶ್ರೀ ಹರಿಗೆ ಪೊಡಮಡುವ ಈ ಸುಪ್ರದೀಪ
 
ಸಿರಿದೇವಿಗಾನಂದ ನೀಡುವಾ ದೀಪ
 
ಬ್ರಹ್ಮರುದ್ರೇಂದ್ರರು ಪಾಡಿ ಪೊಗಳುವ ದೀಪ
ಹನುಮ ಭೀಮರಿಗೆಲ್ಲ ನಲಿವು ನೀಡುವ ದೀಪ
 
ಆನಂದ ತೀರ್ಥರ ಸುಜ್ಞಾನ ದೀಪ
ಪರಮಾತ್ಮ ಪಾರಮ್ಯ ಸಾರುವ ದೀಪ
ದೈತ ಭಾವವ ಸ್ಪುರಿಸಿ ಉದ್ಧರಿಪ ದೀಪ
ಮನುಜ ಚೇತನಕೆಲ್ಲ ಮುಕುತಿ ನೀಡುವ ದೀಪ
 
ಜಗದ ಮೂಲೆಗಳಲ್ಲಿ ಬೆಳಗಲೀ ದೀಪ
ಧನ್ಯತೆಯ ಚಿನ್ಮಯತೆ ಮೂಡಿಸಲೀ ದೀಪ
ದಿವ್ಯತೆಯ ಭವ್ಯತೆಗೆ ದಾರಿ ತೋರಲಿ ದೀಪ
 
ನರಹರಿಯ ಕರುಣೆಯನು ಕರುಣಿಸಲಿ ದೀಪ
 
ಶ್ರೀ ಹರಿವಾಯುಗುರುಗಳ ಪದಕಮಲಗಳಲ್ಲಿ ಭಕ್ತಿಪುರಸ್ಪರವಾಗಿ ಸಮರ್ಪಿಸಲಾಗಿದೆ
 
ಶ್ರೀ ಲಕ್ಷ್ಮೀನರಸಿಂಹಾಯ ನಮಃ
 
292 /ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ