This page has not been fully proofread.

ವರ್ಷಧಾರೆಯ ಸುರಿಸಿ ಹಲವು ಮಹಿಮೆಯ ತೋರ್ದ
 
ಭುವನನಿಯಾಮಕರಾದ ವಾಯುದೇವರ ರೂಪ
 
ಮಧ್ವಮುನಿ ಚರಿತೆಯಲಿ ಅಚ್ಚರಿಯು ಏನಿಲ್ಲ
ಸಕಲ ಜಗಕೆಲ್ಲರೂ ಗುರುವರ್ಯರವರು
ಅವರ ಚರಿತೆಯ ಕಥನ ನಮ್ಮ ಕರ್ತವ್ಯ
ಅದರಿಂದ ವರ್ಣಿಪೆವು ಈ ಪುಣ್ಯ ಶ್ಲೋಕರ ಕಥನ
 
ದೇವತೆಗಳಿಂದಲೂ ಸುಮಧ್ವವಿಜಯದ ಗಾನ
 
ಮಧ್ವಮುನಿಗಳ ಚರಿತೆ ಅತಿಮಾನ್ಯವಾಗಿಹುದು
ಆ ಮಹಿಮರ ಮಹಿಮೆ ವೈವಿಧ್ಯಮಯವಹುದು
ಮಾಧೀಯ ಬ್ರಾಹ್ಮಣನ ಲೇಖನಿಯ ನೆರವಿಂದ
ಈ ಮಹಿಮೆ ಎಲ್ಲೆಡೆಯು ಹರಡಿತೆಂಬುದು ಸಲ್ಲ
ದೇವ ವರರೆಲ್ಲರನು ಮುದಗೊಳಿಪ ಈ ಕಥನ
ಗಂಧರ್ವ ಗಾಯನದಿ ಸಾರ್ಥಕ್ಯ ಪಡೆದಿಹುದು
 
ಕಾಕಿ ಎಂಬುವ ದೋಷವಿಲ್ಲದಾ ಮಧುರ ಧ್ವನಿ
ಗಾಂಧಾರ ಇತ್ಯಾದಿ ಶೃತಿಗಳನ್ನು ಪ್ರಕಟಿಸುವ
ಉಚಿತ ತಾನದಿ ಕೂಡಿ ಪಂಚಮದ ಸ್ವರದಲ್ಲಿ
ದೇವಲೋಕದ ಆ ಗಂಧರ್ವ ಗಾಯಕರು
ಸ್ವರ ವಿಕಾಸಗಳಿಂದ ಸುರರ ಆ ಕವನವನು
ಮಧ್ವಗೀತೆಯನವರು ಪಾಡತೊಡಗಿದರು
 
ಗಂಧರ್ವ ಗಾಯನದ ಮಧ್ವಮುನಿ ಚರಿತೆಯನು
ಸುಮುಕುಟ ಮೌಲಿಗಳ ಆಭರಣ ಭೂಷಿತರೂ
ಅರಳಿದ ಮುಖಕಮಲ ಶೋಭಿತರು ಆ ಸುರರು
ನಮ್ರತೆ, ದೃಢಭಕ್ತಿ, ವಿನಯದಲಿ ಕೂಡಿ
ಆಲಿಸಿದರಾ ದಿವ್ಯ ಭವ್ಯ ಕಥನವನು
ಗಂಧರ್ವ ಗಾಯನದ ಮಧ್ವಮುನಿ ಚರಿತೆಯನು
 
ಹದಿನಾರನೆಯ ಸರ್ಗ / 289
 
48
 
49
 
50
 
51