This page has not been fully proofread.

'ಪಾರಂತೀ' ದೇವಾಲಯದಲ್ಲಿ ತೋರಿದ ಮಹಿಮೆ
 
ನೈವೇದ್ಯ, ಪೂಜೆಗಳು ಸ್ಥಗಿತ ಗೊಂಡಿದ್ದಂಥ
ಪಾರಂತೀ ಎಂಬ ದೇವಸದನದಿ ಒಮ್ಮೆ
ಅತಿಯಾದ ಭಕ್ತಿಯಲಿ ಮಧ್ವಮುನಿ ತೆರಳಿ
ಗ್ರಾಮಾಧಿಪತಿಗಳನು, ಆ ನಾಡನೃಪನನ್ನು
 
ಒಂದೆಡೆ ಕಲೆ ಹಾಕಿ ಚರ್ಚೆಯನ್ನು ನಡೆಸಿ
 
ಅರ್ಧದಷ್ಟೇ ದಿನದಿ ಭೂತಬಲಿ ನಡೆಸಿದರು
 
ಹಿಂದೊಮ್ಮೆ ದ್ವಾಪರದಿ, ಭೀಮಾವತಾರದಲಿ
ಸೋದರರ ಜೊತೆಗೂಡಿ ಪಂಚಾತ್ಮ ಶ್ರೀ ಹರಿಯ
ಪಾರಂತೀ ಗ್ರಾಮದಲ್ಲಿ ಪ್ರತಿಷ್ಠಿಸಿದುದ ನೆನೆದು
ಭೂತಬಲಿ ಪೂಜೆಯ ಅಂಗದಲ್ಲಿ ಒಂದಾದ
ಜಲಧಿಯನು ಅರ್ಪಿಸಿದ ದೌಪದಿಯ ಒಡಗೂಡಿ
ಶ್ರೀ ಹರಿಯ ಪೂಜಿಸಿದ ಪರಿಯನ್ನು ಸ್ಮರಿಸಿದರು
 
ಸರಿದಂತರದಲ್ಲಿ ತರಿಸಿದ ಮಳೆ
 
ಸರಿದಂತರ ವೆಂಬ ಹೆಸರನ್ನು ಹೊತ್ತಿದ್ದ
ಗ್ರಾಮಕ್ಕೆ ಐತಂದ ಮಧ್ವಮುನಿಗಳು ಒಮ್ಮೆ
ಗ್ರೀಷ್ಟದಲಿ ಆ ಊರ ಕೆರೆಯು ಒಣಗಿದ ಕೇಳಿ
ತಕ್ಷಣದಿ ಮೋಡಗಳ ಸಾಲು ಸಾಲನೆ ಕರೆದು
ಮಳೆಯನ್ನು ಸುರಿಸುತ್ತ ಕೆರೆಯ ತುಂಬಿಸುದ ಕಂಡು
ವಿಸ್ಮಯವ ತಾಳಿದರು ಆ ಊರ ಜನರು
 
ಗ್ರಾಮಾಧಿಪತಿಯ ಶರಣಾಗತಿ
 
ದುರ್ಮಂತ್ರ, ದುಷ್ಯತ್ಯ, ದುರಭಿಮಾನವ ತಳೆದ
ದುಷ್ಟರ ಮಾತಿಗೆ ಕಿವಿಗೊಟ್ಟ ಗ್ರಾಮೇಶ
ಮಧ್ವರನು ವಧಿಸುವ ಸಂಚೊಂದ ಹೂಡಿದನು
ಬಳಿಕ ಆ ದುಷ್ಟನು ಮಧ್ವರನು ಕಂಡು
ಸೂರ್ಯನಂತಹ ತೇಜ ಇವರಿಗಿಹುದೆಂದು
ಮಹಿಮರಿಗೆ ನಮಿಸಿದನು ಮೂಕವಿಸ್ಮಿತನಾಗಿ
 
286 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39