This page has not been fully proofread.

ಅಧಿಕಾರವುಳ್ಳವಗೆ ವೇದೋಕ್ತ ಫಲ ಖಚಿತ
ಇಂತೆಂದು ಮಧ್ವಮುನಿ ಉತ್ತರಿಸುತ್ತಿರಲು
ಆ ಧೂರ್ತ ಮತ್ತೊಮ್ಮೆ ಇಂತೆಂದು ನುಡಿದನು
"ವೇದೋಕ್ತ ಫಲವನ್ನು ಪಡೆದವನ ನಾ ಕಾಣೆ
ಇಂತಿರಲು ಅಂತಹ ಯೋಗ್ಯತೆಯ ಅಧಿಕಾರಿ
ಖರವಿಷಾಣದ ತೆರದಿ ಅಪರೂಪಲ್ಲವೆ?"
 
ಅಂತಹ ಆಕ್ಷೇಪ ಸಹಿಸದಾ ಮಧ್ವರು
ನಿಜ ಕರದ ಪಲ್ಲವದಿ ಧಾನ್ಯವನ್ನು ಹಿಡಿದು
ಓಷಧೀ ಸೂಕ್ತವನ್ನು ಪಠಿಸಿದ ಕ್ಷಣದಲ್ಲೇ
ಬೀಜಗಳು ತಕ್ಷಣವೇ ಮೊಳಕೆಗಳ ತಳೆದವು
ನಂತರದಿ ದಲಗಳು, ಎಲೆಗಳು, ಫಲಗಳೂ ಹುಟ್ಟಿದುವು
ಈ ಮಹಿಮೆಯನು ಕಂಡು ಬೆರಗಾದನಾ ಧೂರ್ತ
 
ಪಾದದ ಬೆರಳಿನಿಂದ ಪ್ರಕಾಶ
 
ಮತ್ತೊಂದು ಮಧ್ವರ ಮಹಿಮೆಯನು ಕೇಳಿ !
ರಾತ್ರಿಯ ಕಾಲದಲ್ಲಿ ಅವರು ಬೋಧಿಸುತ್ತಿರಲು
ವ್ಯಾಸಪೀಠದ ದೀಪ ನಂದಿ ಹೋಗುತ್ತಿರಲು
ಆನಂದ ತೀರ್ಥರ ಪಾದದಂಗುಷ್ಠದ
ಉಗುರಿನ ತುದಿಯಿಂದ ಹೊಮ್ಮಿದ ಬೆಳಕಿಂದ
ಶಿಷ್ಯರೆಲ್ಲರೂ ಗ್ರಂಥ ಪಠನವನು ಮಾಡಿದರು
 
ಬಂಡೆಯನು ಎತ್ತಿರಿಸಿದ ಪ್ರಸಂಗ
 
ಒಮ್ಮೆ ಒಂದೆಡೆಯಲ್ಲಿ ನದಿಯ ತೀರದಲ್ಲಿ
ಇರಿಸಲೋಸುಗ ಜನರು ಸಾವಿರದ ಸಂಖ್ಯೆಯಲಿ
ಹೆಬ್ಬಂಡೆಯೊಂದನ್ನು ನೂಕುತ್ತ ನೂಕುತ್ತ
ಮತ್ತಷ್ಟು ನೂಕಲು ಸಾಧ್ಯ ವಿಲ್ಲೆನ್ನುತ್ತ
ಬಂಡೆಯನು ಹಾದಿಯಲೆ ಇರಿಸಿ ಹೋಗಿದ್ದರು
ಇದ ಕಂಡ ಮಧ್ವರು ಇಂತೆಂದು ನುಡಿದರು
 
278/ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
4
 
5
 
6
 
7