This page has not been fully proofread.

ಆ ಲಿಕುಚ ಶೇಖರರು
 
ಪಂಡಿತೋತ್ತಮರಾದ
ಶಿಷ್ಯರೆಂಬುವ ಹೊಲದಿ ಸದ್ವಿದ್ಯೆಯನ್ನು ಬಿತ್ತು
ಆ ಕಾರ್ಯದಲ್ಲಿಯೇ ಹಗಲಿರುಳು ಕಳೆದು
ಗುರುಮಧ್ವರಾದೇಶ ಅನವರು ಸ್ಮರಿಸಿದರು
 
ನಾಲ್ಕು ವರ್ಣದ ಜನಕ, ಗ್ರಾಮಾಧಿಪತಿಗಳಿಗೆ
ಶಿಷ್ಟ ರಕ್ಷಣದಿಂದ ಪರಮ ಪದ ದೊರೆಯುವುದು
ಇಂತು ಆ ಗುರುಗಳಲ್ಲಿ ಎಲ್ಲ ವರ್ಣದ ಜನರೂ
ಶಿಷ್ಯತ್ವ ವಹಿಸುತ್ತ ಅರಸಿದರು ಮುಕ್ತಿಯನ್ನು
 
ಆಚಾರ್ಯರು ಮಾಡಿದ ಅನುಗ್ರಹ
 
ಶ್ರೀ
 
ರಾಮನ ಪ್ರಿಯರು ಶ್ರೀ ಮಧ್ವಮುನಿಗಳು
ಶ್ರೀ ರಾಮನಾ ತೆರದಿ ಪರಿಚರ್ಯ, ದೀಕ್ಷೆ
ಭಕ್ತಿಯೇ ಮೊದಲಾದ ಸದ್ಗುಣದ ಸಜ್ಜನಕ್ಕೆ
ಯೋಗಿ ದುರ್ಲಭವಾದ ಗತಿಯನ್ನು ಕರುಣಿಸಿದರು
 
ಯಾವ ಗುರು ಕರುಣೆಯಲಿ ಶಿಷ್ಯ ಪ್ರಶಿಷ್ಯರ
ಸಾಮರ್ಥ್ಯ ಪ್ರತಿಭೆಗಳು ಖ್ಯಾತಿಯನ್ನು ಪೊಂದಿದವೋ
ಸುಲಭದ ಭಕುತಿಗೆ ಅತಿ ಸುಲಭರೆನಿಸುವ
ಮಧ್ವಪದ ಸುರ ತರುವ ಬಯಸದವ ಯಾರು ?
 
ಏಕವಾಟದಲ್ಲಿ ಚಾತುರ್ಮಾಸ್ಯ
 
ಆಷಾಢ ಶುಕ್ಲದ ಹನ್ನೊಂದನೆಯ ದಿನದಂದು
ಶ್ರೀ ಶೇಷಶಯನನು ಶಯನವನು ಮಾಡಲು
ಸಕಲ ಸಜ್ಜನರೆಲ್ಲ ಪೂಜಿಸುವ ಮಧ್ವರು
ಕಣ್ವ ತೀರ್ಥದ ಮೇಲೆ ಬೀಸುವ ಗಾಳಿಯಲಿ
ಪರಮ ಪಾವನ ತಾಂತ್ರ್ಯ ಗ್ರಾಮದ ಮಠದಲ್ಲಿ
 

 
ಭಕ್ತಿ ವಾತ್ಸಲ್ಯದಲ್ಲಿ ವಾಸ್ತವ್ಯ ಹೂಡಿದರು
 
272/ಶ್ರೀ ಸುಮಧ್ಯ ವಿಜಯ ಕನ್ನಡ ಕಾವ್ಯ
 
136
 
137
 
138
 
139
 
140