This page has not been fully proofread.

ಮಧ್ವಮುನಿಗಳ ಶಿಷ್ಯ ಸಂಕುಲಗಳೆಲ್ಲ
ಧರಗಿಳಿದ ಸೂರ್ಯರೊ ಎಂಬಂತೆ ಬೆಳಗುತ್ತ
ತಮ್ಮ ಪದರಜದಿಂದ ಬುವಿಯ ಪಾವನ ಮಾಡಿ
ದುರ್ಮತದ ತಿಮಿರವನು ನಾಶಮಾಡಿದರು
 
ಮೋಕ್ಷಶಾಸ್ತ್ರದ ಕ್ಷೀರ ಸಾಗರದಿ ಮುಳುಗುತ್ತ
ನಿತ್ಯ ಸುಖಪೂರ್ಣರು ಆ ಮಧ್ವ ಶಿಷ್ಯರು
ಶ್ರೀ ಹರಿಯ ಅಪ್ರತಿಮ ಪ್ರತಿಮೆಗಳ ಪೂಜಿಸುತ
ಚಕ್ರಪಾಣಿಯ ಚರಣ ಸೇವೆಯಲ್ಲಿ ನಿರತರು
 
ಮಧ್ವಮುನಿ ಶಿಷ್ಯಗಣ ಬಹುವಾಗಿ ಬೆಳೆಯಿತು
ಮಧ್ವರಾ ಶಿಷ್ಯರು ಮತ್ತವರ ಶಿಷ್ಯರು, ಅವರ ಪ್ರಶಿಷ್ಯರು
ಹರಿಭಕ್ತಿ ವೈರಾಗ್ಯ ಗುಣದಿಂದ ಭೂಷಿತರು
 
ಜಗದಗಲ ಪಸರಿಸುತ ಬುವಿಯಲಂಕರಿಸಿದರು
 
ಸರ್ವದಾ ಸಕಲ ಸಚ್ಛಾಸ್ತ್ರ ವ್ಯಾಖ್ಯೆಗಳು
ಇದರಿಂದ ಲಭಿಸುವ ಸೌಖ್ಯ ಸಾಗರದಲ್ಲಿ
ಆ ಶಿಷ್ಯರೆಲ್ಲರೂ ವಿಹರಿಸುತ್ತಿದ್ದರು
ದುರ್ವಚನ ಖಂಡಿಸುತ ಸಚ್ಛಾಸ್ತ್ರ ಸಾರಿದರು
 
ಮಧ್ವರಾ ಶಿಷ್ಯ ಪ್ರಶಿಷ್ಯರಲಿ ಕೆಲರು
 
ಅಲ್ಪ ಶ್ರವಣವ ಮಾಡಿ ಭಕ್ತಿಯನ್ನು ತಳೆದವರು
ಅಲ್ಪ ಬುದ್ಧಿಯ ಕೆಲರು ಶಾಸ್ತ್ರಗಳ ಶ್ರವಣವನು
ಬಹು ಬಾರಿ ಮಾಡುತ್ತ ಸಾರ್ಥಕ್ಯ ಪಡೆದವರು
 
ಗೃಹಸ್ಥ ಶಿಷ್ಯರು
 
ಮಧ್ವಮುನಿ ಶಿಷ್ಯರಲಿ ಸಂಸಾರಿ ಹಲವರು
 
ಗುರುಗಳ ಅಪರಿಮಿತ ಕರುಣೆಯನು ಪಡೆದವರು
 
ಲಿಕುಚ ವಂಶೋದ್ಭವರಾದ ಮೂರು ಮಹನೀಯರು
ತ್ರೇತಾಗ್ನಿ ಯಂದದ ತೇಜವನು ಪಡೆದವರು
 
ಹದಿನೈದನೆಯ ಸರ್ಗ / 271
 
130
 
131
 
132
 
133
 
134
 
135