This page has not been fully proofread.

ದೃಢಚಿತ್ತದಿಂದಲಿ ಶಿಷ್ಯತ್ವ ವಹಿಸಿದ್ದ
ಬಾದರಾಯಣರನ್ನು ಶ್ರೀ ವಿಷ್ಣುತೀರ್ಥರು
ಅತಿಯಾದ ಕೃಪೆಯನ್ನು ಅವರಲ್ಲಿ ತೋರುತ್ತ
ಉತ್ತಮಗೊಳುತ್ತಮರು ಎಂಬಂತೆ ಮಾಡಿದರು
 
ಸರ್ವದಾ ಶ್ರೀ ಹರಿಗೆ ಪ್ರಿಯವಾದ ಕಾವ್ಯವನೆ
ಎಸಗುವ ಆ ನಮ್ಮ ಶ್ರೀ ವಿಷ್ಣುತೀರ್ಥರು
 
ಇತರರಿಗೆ ಏರಲು ಅತಿ ಕಠಿಣವಾದಂಥ
ಕುಮಾರ ಪರ್ವತವನೇರಿದರು ಸುಲಭದಲ್ಲಿ
 
ಶ್ರೀ ಪದ್ಮನಾಭತೀರ್ಥರ ಮಹಿಮೆ
ಗೋದಾವರೀ ನದಿಯ ತೀರದಿಂದೈತಂದ
ಪದ್ಮನಾಭರು ಎಂಬ ಪಂಡಿತೋತ್ತಮರು
ಭೂಮಿಯಲ್ಲಿ ಪಸರಿಸಿದ ಮಧ್ವಮುನಿ ಗುಣದಿಂದ
ಆಕರ್ಷಣೆಯ ಹೊಂದಿ ಶಿಷ್ಯತ್ವ ವಹಿಸಿದರು
 
ಶ್ರವಣ, ಮನನಾದಿಗಳು, ಭಕ್ತಿ, ವಿರಕ್ತಿಗಳು
ನಿತ್ಯಸೇವೆಗಳಿಂದ ಸಂತುಷ್ಟರಾಗಿ
ಆನಂದ ತೀರ್ಥರು ಶ್ರೀ ಪದ್ಮನಾಭರಿಗೆ
ತ್ವರಿತದಲಿ ಬೋಧಿಸಿದರಧ್ಯಾತ್ಮ ವಿದ್ಯೆಯ
 
ಯುಕ್ತಿ ಪ್ರವಾಹದಲ್ಲಿ ರೋಷವನು ತಾಳಿ
ಪರಶಾಸ್ತ್ರ ನದಿಗಳಲ್ಲಿ ಸಂಚಾರ ಹೂಡಿ
ವಿದ್ವತ್ತಿಮಿಂಗಿಲರು, ಆ ಪದ್ಮನಾಭರು
ವೇದಾಂತ ಸಾಗರವ ತೊರೆಯಲೇ ಇಲ್ಲ
 
ವಾದಿಗಳಲತಿ ಶ್ರೇಷ್ಠ ಶ್ರೀ ಪದ್ಮನಾಭರು
ತಮ್ಮ ಮಂಡಲದಲ್ಲಿ ವೀರರೆಂದೆಣಿಸಿದ್ದ
ಮಾಯಾವಾದಿಗಳೆಂಬ ಗ್ರಾಮಸಿಂಹಗಳನ್ನು
ವ್ಯಾಖ್ಯಾನ ಗರ್ಜನೆಯ ನೆರವಿಂದ ಜಯಿಸಿದರು
 
ಹದಿನೈದನೆಯ ಸರ್ಗ / 269
 
118
 
119
 
120
 
121
 
122
 
123