This page has not been fully proofread.

ಶ್ರೀ ವಿಷ್ಣುತೀರ್ಥರು ಪರಮ ಯತಿಶ್ರೇಷ್ಠರು
ಭಕ್ತ ಜನರಿಂದವರು ಪರಮ ಸನ್ಮಾನಿತರು
ಶಿಷ್ಯವರ್ಗವು ತಂದ ಪಂಚಗವ್ಯವನವರು
ಐದು ದಿನಕ್ಕೊಮ್ಮೆ ಸ್ವಲ್ಪ ಸ್ವೀಕರಿಸಿದರು
 
ಇಂದ್ರಿಯಗಳ ನಿಗ್ರಹವು ಅತಿ ಸುಲಭವವರಿಗೆ
ಕಾಲಾನುಕ್ರಮದಲ್ಲಿ ಪಂಚಗವ್ಯವ ತೊರೆದು
ಗಿಡಗಳಿಂದುದುರಿದ ಬಿಲ್ವ ಪತ್ರೆಗಳನ್ನು
ಕಿಂಚಿತ್ತು ಜಲದಿಂದ ಉದರವನು ಸಲಹಿದರು
 
ಪರಮಾತ್ಮ ಕೃಪೆಯನ್ನು ಪಡೆದ ಮುನಿಗಳು ಕೂಡ
ಕುಳಿತು ಕೊಳ್ಳಲು ಬರದ ಶಿಲೆಯಲ್ಲಿ ಕುಳಿತು
ಮನವ ನಿಗ್ರಹಿಸುತ್ತ, ಸನ್ನಡತೆ ರೂಢಿಸುವ
ವಿಷ್ಣುತೀರ್ಥರು ಆಗ ಕಠಿಣ ತಪಗೈದರು
 
ರೇಚಕಾದಿಗಳಿಂದ ಶ್ವಾಸವಾಯುವ ಜಯಿಸಿ
ಪವನಾಂಶ ಅನುಜರು ಆ ವಿಷ್ಣುತೀರ್ಥರು
ಮನವೆಂಬ ಸಾರಥಿಯ ನೆರವನ್ನು ಪಡೆದು
ವಿಷಯವೆಂಬುವ ಅಶ್ವವಶಪಡಿಸಿಕೊಂಡರು
 
ವೇದಾಂತ ಕೋವಿದರು ಶ್ರೀ ವಿಷ್ಣುತೀರ್ಥರು
ಶ್ರೀ ಹರಿಯ ರೂಪವನು ಮನದಲ್ಲಿ ಸ್ಮರಿಸುತ್ತ
ಯೋಗದಲಿ ಲಭಿಸುವ, ವ್ಯಥೆಯ ನಿವಾರಿಸುವ
"ಸಮಾಧಿ" ಸ್ಥಿತಿಯನ್ನು ಶೀಘ್ರದಲಿ ಗಳಿಸಿದರು
 
ನಿರ್ದೋಷ, ಆನಂದ ಗುಣಗಳಿಗೆ ಸಾಗರನೂ
ಸ್ವಾಶ್ಚರ್ಯ ರತ್ನ ಆ ಮುಕುಂದನನು
ಸುಂದರದ ರೂಪದಲಿ ಮನವನ್ನು ತೊಡಗಿಸಿದ
ಶ್ರೀ ವಿಷ್ಣುತೀರ್ಥರು ಬೇರಾವುದನ್ನೂ ಗಮನಿಸಲೆ ಇಲ್ಲ
 
ಹದಿನೈದನೆಯ ಸರ್ಗ / 267
 
106
 
107
 
108
 
109
 
110
 
111