This page has not been fully proofread.

ಊಟ ನಿದ್ರೆಗಳನ್ನು, ಆಮೋದಗಳ ತೊರೆದು
ಸನ್ಯಾಸ ಸ್ವೀಕಾರ ಕಾಲವನು ವೀಕ್ಷಿಸುತ
ಜೇಷ್ಠರಾಮನ ಬರವ ಭರತ ಕಾಯ್ದಂತೆ
ಹಾತೊರದು ಕಾಯ್ದರು ಆ ಮಧ್ವರನುಜರು
 
ನಾಲ್ಕು ತಿಂಗಳ ವ್ರತದ ಗಡುವು ಮುಗಿದಿರಲು
ಮಧ್ವಮುನಿಗಳು ಪಯಣ ಮುಂದುವರಿಸಿರಲು
ಅಗಲಿಕೆಯ ತಾಳದೆಯೆ ತಾನೂ ಹೊರಡುವೆನೆಂದ
 
ರಾಜನನು ಸಂತೈಸಿ ಪಾಜಕಕೆ ಮರಳಿದರು
 
ಪರಿಶುದ್ಧ ವಂಶದಲಿ ಜನ್ಮವನು ತಳೆದವರು
ವೇದಾದಿ ವಿದ್ಯೆಯಲ್ಲಿ ಪರಮ ಪಾರಂಗತರು
ಕೃತಕೃತ್ಯಕ್ರಿಯರೂ, ವಿಷಯ ವಿರಕ್ತರೂ
ಅನುಜರಿಗೆ ಆಶ್ರಮವ ಮಧ್ವಮುನಿ ನೀಡಿದರು
 
ನಾಗದ ಬ್ರಹ್ಮನಿಗೆ ಸಮರು ಗುರುಮಧ್ವರು
ಏಕಾಂತದಲ್ಲವರು, ಪಂಚಾಗ್ನಿಗಳ ನಡುವೆ
ತಾಪಸೋತ್ತಮರಿಗೂ ಅರಿಯಲು ಬಾರದಿಹ
ಅತಿ ಗೂಢ ತತ್ವಗಳ ಬೋಧಿಸಿದರು
 
ಪ್ರೇಮದಮೃತದಿಂದ ಕೂಡಿರುವ ಮೊಗದಿಂದ
ಕಿರುನಗೆಯ ಸೂಸುತ್ತ, ಕುಡಿನೋಟ ಬೀರುತ್ತ
ಆನಂದ ತೀರ್ಥರು, ತಮ್ಮ ಆ ಅನುಜರಿಗೆ
"ವಿಷ್ಣು ತೀರ್ಥರು " ಎಂಬ ಹೆಸರನ್ನು ನೀಡಿದರು
 
ವೇದಾಂತಗುರುಗಳ ಸೋದರರು ಆಗ
 
ವೇದಾಂತ ಶಾಸ್ತ್ರದ ಶ್ರವಣ ಮನನಾದಿಯಲಿ
ಅನುವಾದ ಮುಂತಾದ ಸತ್ಕರ್ಮಗಳಲಿ
ಸತ್ಕಾಲ ಕ್ಷೇಪವನು ಮಾಡುತ್ತ ಕಳೆದರು
 
ಹದಿನೈದನೆಯ ಸರ್ಗ / 265
 
94
 
95
 
96
 
97
 
98
 
99