This page has not been fully proofread.

'ಮೂರು ಭಾಷೆಗಳಲ್ಲಿ ಅರಿವನ್ನು ಅರಿಯದೆ
ಪುರಾಣಗಳನಾಶ್ರಯಪ ಪಾಂಥರಿಗೆ ತಮ್ಮಿಂದ
ಭಾಗವತ ತಾತ್ಪರ್ಯ ನಿರ್ಣಯವು ಎಂಬ
ಸಖನೊಬ್ಬ ದೊರತಿಹನು ಪುಣ್ಯ ಫಲದಿಂದ "
 
"ಅಮರರಾಶ್ರಯಿಸುವ ಛಾಯೆಯನ್ನು ಹೊಂದಿರುವ
ಕಲ್ಪವೃಕ್ಷದ ತೆರದಿ ಉತ್ತಮೋತ್ತಮವಾದ
ದೇವತಾಪ್ರಿಯವಾದ ತಂತ್ರಸಾರವ ಪಡೆದ
ಆವನಿಹ ಬಯಕೆಯನ್ನು ಪೂರೈಸಿಕೊಳ್ಳದವ ?
 
"ಕರುಣೆಯ ಸಾಗರರೆ, ಆನಂದ ತೀರ್ಥರೆ
ಕಥಾ ಪ್ರಮಾಣಗಳ ದರ್ಶನವ ಪಡೆವುದಕೆ "
ಕಣ್ಣುಗಳ ತರದಲ್ಲಿ ಶೋಭಿಸುತ್ತಿರುವ
ವಾದ ಸನ್ಮಾನ ಲಕ್ಷಣವ ರಚಿಸಿಹಿರಿ
 
"ತತ್ವನಿರ್ಣಯವೆಂಬ ಆ ನಿಮ್ಮ ರಚನೆ
ಅಸಹಾಯ ಶೂರ ಆ ಪಾರ್ಥನಾ ತೆರದಲ್ಲಿ
 
ವಾದಿಗಳ ತಲೆಯನ್ನು ಮೆಟ್ಟಿ ನಿಂತಿಹುದು
ಯಾರಿಂದ ಇದು ಪೂಜ್ಯ ವಲ್ಲವಾಗಿಹುದು ?
 
ವಾದವೇ ಮೊದಲಾದ ಪ್ರಕರಣ ಗ್ರಂಥಗಳು
ಬೆಂಕಿಯ ಕಿಡಿಯಂತೆ ಅತಿ ಸಣ್ಣ ವಿಹವು
ವಿಪಕ್ಷ ಕಕ್ಷದಿ ಒಣಗಿದ ಕಾನನವ
ಮಾರುತನ ರೀತಿಯಲಿ ನಾಶಗೊಳಿಸಿಹವು
 
""
 
ಆ ಕೃಷ್ಣನಾನನದಿ ವಿಶ್ವ ತೋರಿದ ಹಾಗೆ
ಅನಂತರ್ಥಗಳ ಹೊಂದಿಹ ಭಾಷ್ಯ ಸಂಗ್ರಹವು
ಗಾತ್ರದಲ್ಲಿ ಕಿರಿದಾಗಿ, ಪಾತ್ರದಲ್ಲಿ ಹಿರಿದಾಗಿ
ತಮ್ಮ ಅದ್ಭುತವಾದ ಸಾಮರ್ಥ್ಯ ತೋರಿಹುದು "
 
262 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
77
 
78
 
.
 
79
 
80
 
81