This page has not been fully proofread.

ಬ್ರಹ್ಮಸೂತ್ರದ ಭಾಷ್ಯ ವ್ಯಾಖ್ಯಾನವನ್ನು
ನಂತರದಿ ಮಧ್ವಮುನಿ ಆರಂಭಿಸಿದರು
ಸೂರಿನಂದನರದನು ಶ್ರವಣ ಮಾಡಿದರು
ಸಂತರ ಪ್ರೀತಿಯನು, ದುಷ್ಟರಪ್ರೀತಿಯನ್ನು ಒಮ್ಮೆಗೇ ಪಡೆದರು
 
ತ್ರಿವಿಕ್ರಮ ಪಂಡಿತಕೃತ ಮಧ್ಯಗ್ರಂಥ ವರ್ಣನ
 
ವಿಕ್ರಮಾರ್ಯರು ಆಗ ಗುರ್ವಾಜ್ಞೆ ಗೌರವಿಸಿ
ದುಷ್ಕರದ ಭಾಷ್ಯಕ್ಕೆ ಟೀಕೆಯನು ರಚಿಸಲು
ಉದ್ಯುಕ್ತರಾಗುತ್ತ ಪರಮಗುರು ಮಧ್ವರನು
ಕುರಿತು ಇಂತೆಂದು ಪ್ರಾರ್ಥಿಸಲು ತೊಡಗಿದರು
 
"ಕವಿವರ್ಯರೆಲ್ಲರೂ ಹಗಲಿರಳು ಶ್ರಮಿಸುತ್ತ
ನಿಮ್ಮ ಭಾಷ್ಯಾಬ್ಲಿಯ ನ್ಯಾಯರತ್ನಗಳನ್ನು
ಹೆಕ್ಕುತ್ತ ತೆಗೆದರೂ ಸಂಗ್ರಹವು ಮುಗಿದಿಲ್ಲ
ಅದ್ಭುತವು ! ಅದ್ಭುತವು ! ಇದರ ಗಾಂಭೀರ್ಯ !
 
"ಉಪನಿಷದ್ಭಾಷ್ಯಗಳ ಮಂದಿರಗಳಲ್ಲಿ
 
ಯುಕ್ತವಹ ಅರ್ಥಗಳ ಹತ್ತು ಉಪನಿಷತ್ತುಗಳ
ದೇವತೆಗಳೆಲ್ಲರೂ ದೇವಿಯರೆಲ್ಲರನು
ಸುಪ್ರೀತಗೊಳಿಸುವ ತರದಲ್ಲಿ ಇಹವು
 
"ಗೀತೆಯ ಭಾಷ್ಯಗಳು, ಅದರ ತಾತ್ಪರ್ಯಗಳು
ಪ್ರತಿವಾದ ಹೂಡಲು ಸಾಧ್ಯವಿರದಂತಹ
ವಚನವೃಂದಗಳಿಂದ ವಿಜೃಂಭಿಸಿಹವು
ಅರ್ಕೆಂದು ಕಿರಣದಲಿ ಜಗವು ಬೆಳಗಿದ ಹಾಗೆ
 
"ನಿಮ್ಮ ಚಿತ್ತಾದ್ರಿಯು ಮಥಿಸಿ ಹೊರತೆಗೆದಿರುವ
ಇತಿಹಾಸ ಪುರಾಣದ ಕ್ಷೀರಸಾಗರದಿಂದ
ಹೊರಬಂದ ಭಾರತದ ತಾತ್ಪರ್ಯ ಸುಧೆಯನ್ನು
 
ಯಾವ ಸುಜನನು ತಾನೆ ಸವಿಯದಿಹನು' ?
 
ಹದಿನೈದನೆಯ ಸರ್ಗ / 261
 
71
 
72
 
73
 
74
 
75
 
76