This page has not been fully proofread.

ದೇಹವಿದ್ದರೂ ಈಶನಿಗೆ ಊರ್ಮಿಗಳು ಇಲ್ಲ
ದೇಹತ್ವ ಹೇತುವಿಗೆ ಅನೈಕಾಂತಿಕತೆ ಬಹುದು
ಈಶ್ವರಗೆ ದೇಹವಿರದಿರೆ, ಇಚ್ಛಾದಿಗಳೂ ಇರದು
ಆಗವನು ಶಶವಿಷಾಣದ ತೆರದಿ ಅಸತ್ ಆಗುವನು
 
ಜ್ಞಾತ್ರಾದಿ ರೂಪಗಳ ವೈಲಕ್ಷಣ್ಯವನ್ನು ನೀಡಿದರೆ
ಈಶ್ವರಗೂ ದೇಹವನು ಒಪ್ಪಿದಂತಾಯ್ತು
ಇದರಿಂದ ನಮ್ಮ ಮತ ಒಪ್ಪಿದಂತಾಯ್ತು
ಪ್ರಾಕೃತಾಕೃತಿ ಅವಗೆ ನಾವು ಹೇಳುವುದಿಲ್ಲ
 
ಅಂತಾದರೆ ನಾವು ಈಶ್ವರನ ತೆರದಿ
ಸ್ವರೂಪ ಭೂತದ ದೇಹ ಮುಕ್ತನಿಗೂ ಇದೆ
ಎಂಬಂಥ ಮಾತನ್ನು ಸ್ವೀಕರಿಸಬೇಕು
ಮುಕ್ತನಿಗೆ ಪ್ರಾಕೃತದ ದೇಹದdಷ್ಟವಿರದು
 
ಮುಕ್ತನಿಗೆ ಇಹುದೆ ಅವಯವಗಳು ?
ವಿನಾಶತ್ವ ಪ್ರಸಂಗದಿಂದ ಅವಗಿಲ್ಲ ಅವಯವ
 
ಪಟದಂತ ಎಂಬುವ ಅನುಮಾನ ಹೊಂದಿದರೆ
 
ಎಂತಹ ಅವಯವವ ನೀವು ಒಪ್ಪುವುದಿಲ್ಲ?
 
ಸ್ವರೂಪದೊಳು ಭಿನ್ನವಹ ಅವಯವಗಳನ್ನು
ಮುಕ್ತನಿಗೆ ಇಲ್ಲವೆಂದನ್ನು ವಿರೆ ನೀವು ?
ಅದರಿಂದ ಸಿದ್ದಿ ಸಾಧನ ದೋಷ ಬಹುದು.
ಮುಕ್ತಸ್ವರೂಪರಿಗೆ ತಕ್ಕ ಅವಯವವನ್ನು ನಾವು ಒಪ್ಪೋಣ
 
ಪ್ರತಿವಾದಿ ಪಕ್ಷದಲ್ಲಿ ಪರಮಾತ್ಮ ವ್ಯಾಪ್ತಿಯನು
ಪರಮಾಗ್ವಾದಿ ಕ್ಷೇತ್ರದಲಿ, ವ್ಯಾಮಾದಿಗಳಲಿ
ಅಭಿನ್ನ ಅವಯವವ ಸ್ವೀಕರಿಸಲಾಗಿದೆ
ಅಂತೆಯೇ ಮುಕ್ತರಿಗೆ ಅವಯವಗಳಿಹವು
 
258 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
53
 
54
 
55
 
56
 
57
 
58