This page has not been fully proofread.

ಪ್ರವಚನವ ಪ್ರಾರಂಭಿಸಿದರವರು ಆಗ
ಉಪನಿಷದ್ಭಾಷ್ಯವನು ಅತಿ ಮಂದ್ರಸ್ಥಾಯಿಯಲಿ
ಶಿಷ್ಯರೆಲ್ಲರೂ ಗ್ರಹಿಸಿ ಅರ್ಥೈಸಿಕೊಳ್ಳುವಂತೆ
ಸುಸ್ಪಷ್ಟ ಪಠನವನು ಸುಲಭದಲ್ಲಿ ಮಾಡಿದರು
ಶ್ರವಣೇಂದ್ರಿಯಗಳಿಗೆಲ್ಲ ಅಮೃತ ಪ್ರಾಯವದು
ಅಮೃತಮಯ ಮೋಕ್ಷಕ್ಕೆ ಸಾಧನವು ಅಹುದು
 
ಆನಂದ ತೀರ್ಥರು ಆಲಸ್ಯರಹಿತರು
ಪ್ರಶ್ನೆಗಳಿಗೆಲ್ಲದಕೂ ನಗುಮೊಗದ ಉತ್ತರ!
ಸೂರ್ಯಸುತ ಕರ್ಣನು ಧನವ ನೀಡಿದ ಹಾಗೆ
ಸುಜನರಿಗೆ ಉತ್ತರವ ದಯಪಾಲಿಸಿದರು
ಕದನದಲಿ ಪಾರ್ಥನು ಬಿಟ್ಟ ಬಾಣದ ತೆರದಿ
ದುಷ್ಟರಿಗೆ ಖಂಡನೆಯ ಮಾತುಗಳ ನೀಡಿದರು
 
ಹತ್ತಾರು ಸಾವಿರದ ಕಿರಣಗಳ ಆ ಸೂರ್ಯ -
ಮೆಲಮೆಲನೆ ಪಡುವಣದ ಕಡೆಗೆ ಸರಿದಿರಲು
 
ಪ್ರವಚನವ ಪೂರೈಸಿ ಕೊಳದ ಬಳಿ ನಡೆದಿರಲು
ಆನಂದ ತೀರ್ಥರ ಸಂಬಂಧ ಹೊಂದಲು
ಗಂಗಾದಿ ತೀರ್ಥಾಭಿಮಾನಿಗಳು ಎಲ್ಲರೂ
ತ್ವರೆಯಿಂದ ಕೊಳದಲ್ಲಿ ಸನ್ನಿಹಿತರಾದರು
 
ಅತ್ಯಂತ ಪರಿಶುದ್ಧ ಆ ಜಲಸಮೂಹ!
ಅಂತರಂಗದ ತುಂಬ ಸ್ನೇಹವನ್ನು ತುಂಬಿಟ್ಟು
ಶ್ರೇಷ್ಠತಮ ಮುನಿಗಣವ ಹೋಲುವಂತಿತ್ತು
ಮೊದಲಿನಲಿ ಮಧ್ವರಾ ಪ್ರತಿಬಿಂಬ ಸ್ವೀಕರಿಸಿ
ಸುಜನರಿಗೆ ಪ್ರಿಯವಾದ ಮಧ್ವರಾಕೃತಿಯನ್ನು
ಮಜ್ಜನದ ಕಾಲದಲಿ ಸ್ಪುಟವಾಗಿ ಪಡೆಯಿತು
 
ಹದಿನಾಲ್ಕನೆಯ ಸರ್ಗ / 239
 
24
 
25
 
26
 
27