This page has not been fully proofread.

ಹಕ್ಕಿಗಳ ಮಧುರತಮ ದನಿಯ ಇಂಚರದಂತ
ನಿಶೆಯಲ್ಲಿ ಹನಿಯುವ ಹಿಮದ ಮಣಿಯಂತ
ವಿಪುಲ ಆನುರಾಗವನು ತಕ್ಷಣವೇ ಪಡೆದಂತೆ
ತನ್ನ ಆಗಮನದಲಿ ಸಂತುಷ್ಟಿ ಪಡೆದಂಥ
ನಿರ್ಮಲಾಂಬರದಲ್ಲಿ ಸ್ಥಿತಕಮಲ ವದನಗಳ
ದಿಕ್ಷುರಂಧ್ರಗಳನ್ನು ಉದಯರವಿ ಚುಂಬಿಸಿದ
 
ರಭಸದಿಂದಲಿ ಮಾಳ ನಮನದಿಂದಾಗಿ
ಹುಟ್ಟಿದಾ ಧೂಳಿಗಳ ಶೋಭಾವಿಶೇಷ !
 
ಕಿಟಕಿಯಲಿ ತೂರಿದಾ ಸೂರ್ಯ ಕಿರಣಗಳು
 
ಸಕಲ ದಿಕ್ಕುಗಳಲ್ಲಿ ಸಾರಿತ್ತು ಸಂದೇಶ:
"ಶಾಸ್ತ್ರ ಶ್ರವಣಕೆ ಇದು ಸರಿಯಾದ ಕಾಲ
ಮಧ್ವ ಶಿಷ್ಯರಿಗಾಯ್ತು ಮಿತ್ರ ಉಪಕಾರ
 
ವಿಹಿತ ಕರ್ಮವನೆಲ್ಲ ವಿಹಿತದಲಿ ಪೂರೈಸಿ
ಧನ್ಯ ಸನ್ಯಾಸಿಗಳ ವರ್ಗದಿಂದೊಡಗೂಡಿ
ತ್ವರೆಯಿಂದ ಆ ಮಧ್ವ ಶಿಷ್ಯರುಗಳೆಲ್ಲ
ವ್ಯಾಖ್ಯಾನ ಮಂಟಪದಿ ರಾರಾಜಿಸುತ್ತಿದ್ದ
ಮಧ್ವಮುನಿಗಳ ಶ್ರೇಷ್ಠ ಯೋಗಪೀಠದ ಸುತ್ತ
ಕೂಡಿದರು ವ್ಯಾಖ್ಯಾನ ಶ್ರವಣಕಾಗಿ
 
ಮುರವೈರಿಯಾವಾಸ ಸ್ಥಾನ ದಂತಿದ್ದ
ನಿರ್ಮಲ ಬಭುರದಿ ರಾರಾಜಿಸುತ್ತಿದ್ದ
ರಮ್ಯ ಆಚ್ಛಾದನದಿ ಕೂಡಿ ಕಂಗೊಳಿಸಿದ್ದ
ವಿವಿಧ ಕವಲಿಕೆಯಿಂದ ಕೂಡಿ ಮೆರೆದಿದ್ದ
ತಾಲಪತ್ರಗಳ ಆ ಶ್ರೇಷ್ಠತಮ ಸಂಪುಟಗಳು
ಅಂತರಂಗದ ಬುದ್ಧಿ ಪರಮಾತ್ಮ ರೂಪಗಳು !
 
16
 
17
 
18
 
19