2023-02-21 18:39:42 by ambuda-bot
This page has not been fully proofread.
ಮಧ್ವಮುನಿಗಳ ಹಲವು ಯತಿಶ್ರೇಷ್ಠ ಶಿಷ್ಯರು
ಶಾಸ್ತ್ರದಲ್ಲಿ ಸೂಚಿಸಿಹ ದಂತಕಾಷ್ಠಗಳಿಂದ
ದಂತಗಳಿಗೀಯುವರು ಧವಳ ಕಾಂತಿಯನ್ನು
ಕಲ್ಯಾಣಿಯಲಿ ಮಿಂದು ಶುದ್ಧಿಗೊಳ್ಳುವರು
ಈ ತೆರದ ಶ್ರೇಷ್ಠತಮ ಕರ್ಮದಾಚರಣೆಯಲ್ಲಿ
ಗುರುಗಳಲಿ ನಿಷ್ಠೆಯನು ಸ್ಪುಟಗೊಳಿಸುತ್ತಿದ್ದರು
ರಾತ್ರಿಯಲ್ಲಿ ಗುರುಗಳು ಪವಡಿಸಿದ ಬಳಿಕವೇ
ಶಿಷ್ಯರೆಲ್ಲರೂ ತಮ್ಮ ಶಯ್ಕೆಗಳ ಸೇರುವರು
ಬೆಳಗಿನಲಿ ಗುರುಗಳಿಗೆ ಮುಂಚಿತವೇ ಎಚ್ಚೆತ್ತು
ಮರುದಿನದ ರಾತ್ರಿಯ ಮಧ್ಯದ ವರೆಗೂ
ಸಂತೋಷ ಚಿತ್ತದಲ್ಲಿ ಗುರುಸೇವೆ ಮಾಡುವರು
ಇಲ್ಲದಿರೆ ಶಿಷ್ಯರಿಗೆ ಸದ್ಧತಿಯು ಲಭಿಸುವುದೆ ?
ಹಿಂದಿನ ರಾತ್ರಿಯಲ್ಲಿ ಶ್ರವಣ ಮನನಗಳಿಂದ
ಬಹುವಾಗಿ ದಣಿದಿದ್ದ ಹೊಸ ಶಿಷ್ಯನೊಬ್ಬ
ರಾತ್ರಿಯಲ್ಲಿ ಸರಿಯಾಗಿ ನಿದ್ರಿಸದೆ ಆತ
ಬೆಳಗಿನ ಮಂಪರಲಿ ಪರಮ ಪರವಶನಾದ
ತನಗಿಂತಲೂ ಮೊದಲು ಗುರುವು ಹೊರಟುದ ಕಂಡು
ಆ ಶಿಷ್ಯ ಬಹುವಾಗಿ ಪರಿತಾಪ ಪಟ್ಟ
"ನಮಗಿಂತಲೂ ಮೊದಲು ನೀವೇಳಲಿಲ್ಲ
ನಿಮ್ಮ ಪಾಲಿನ ಕೆಲಸ ನಿರ್ವಹಿಸಲಿಲ್ಲ"
ಎಂದೆಲ್ಲ ಗುರುಗಳು ಆರೋಪಿಸುವರೆಂಬ
ಶಂಕೆಯನು ತಾಳುತ್ತ ಹಲವಾರು ಶಿಷ್ಯರು
ನಮ್ರಭಾವದಿ ನಿಂತು, ದಾರಿಗಡ್ಡವ ಬಿಟ್ಟು
ನೀರೊಳಗೆ ಇಳಿಯದೆಯೆ ಪ್ರವಚನವ ಕೇಳಿದರು
ಹದಿನಾಲ್ಕನೆಯ ಸರ್ಗ / 235
8
10
11
ಶಾಸ್ತ್ರದಲ್ಲಿ ಸೂಚಿಸಿಹ ದಂತಕಾಷ್ಠಗಳಿಂದ
ದಂತಗಳಿಗೀಯುವರು ಧವಳ ಕಾಂತಿಯನ್ನು
ಕಲ್ಯಾಣಿಯಲಿ ಮಿಂದು ಶುದ್ಧಿಗೊಳ್ಳುವರು
ಈ ತೆರದ ಶ್ರೇಷ್ಠತಮ ಕರ್ಮದಾಚರಣೆಯಲ್ಲಿ
ಗುರುಗಳಲಿ ನಿಷ್ಠೆಯನು ಸ್ಪುಟಗೊಳಿಸುತ್ತಿದ್ದರು
ರಾತ್ರಿಯಲ್ಲಿ ಗುರುಗಳು ಪವಡಿಸಿದ ಬಳಿಕವೇ
ಶಿಷ್ಯರೆಲ್ಲರೂ ತಮ್ಮ ಶಯ್ಕೆಗಳ ಸೇರುವರು
ಬೆಳಗಿನಲಿ ಗುರುಗಳಿಗೆ ಮುಂಚಿತವೇ ಎಚ್ಚೆತ್ತು
ಮರುದಿನದ ರಾತ್ರಿಯ ಮಧ್ಯದ ವರೆಗೂ
ಸಂತೋಷ ಚಿತ್ತದಲ್ಲಿ ಗುರುಸೇವೆ ಮಾಡುವರು
ಇಲ್ಲದಿರೆ ಶಿಷ್ಯರಿಗೆ ಸದ್ಧತಿಯು ಲಭಿಸುವುದೆ ?
ಹಿಂದಿನ ರಾತ್ರಿಯಲ್ಲಿ ಶ್ರವಣ ಮನನಗಳಿಂದ
ಬಹುವಾಗಿ ದಣಿದಿದ್ದ ಹೊಸ ಶಿಷ್ಯನೊಬ್ಬ
ರಾತ್ರಿಯಲ್ಲಿ ಸರಿಯಾಗಿ ನಿದ್ರಿಸದೆ ಆತ
ಬೆಳಗಿನ ಮಂಪರಲಿ ಪರಮ ಪರವಶನಾದ
ತನಗಿಂತಲೂ ಮೊದಲು ಗುರುವು ಹೊರಟುದ ಕಂಡು
ಆ ಶಿಷ್ಯ ಬಹುವಾಗಿ ಪರಿತಾಪ ಪಟ್ಟ
"ನಮಗಿಂತಲೂ ಮೊದಲು ನೀವೇಳಲಿಲ್ಲ
ನಿಮ್ಮ ಪಾಲಿನ ಕೆಲಸ ನಿರ್ವಹಿಸಲಿಲ್ಲ"
ಎಂದೆಲ್ಲ ಗುರುಗಳು ಆರೋಪಿಸುವರೆಂಬ
ಶಂಕೆಯನು ತಾಳುತ್ತ ಹಲವಾರು ಶಿಷ್ಯರು
ನಮ್ರಭಾವದಿ ನಿಂತು, ದಾರಿಗಡ್ಡವ ಬಿಟ್ಟು
ನೀರೊಳಗೆ ಇಳಿಯದೆಯೆ ಪ್ರವಚನವ ಕೇಳಿದರು
ಹದಿನಾಲ್ಕನೆಯ ಸರ್ಗ / 235
8
10
11