This page has not been fully proofread.

ಬೆರಗಾದ ಪಂಡಿತರು ಬೆಳಗಾದ ಕೂಡಲೇ
ವಿಷಯ ವಿನಿಮಯಕಾಗಿ ಮಧ್ವರನು ಕಂಡರು
ನಾನಾ ಪ್ರಮೇಯಗಳ ಚರ್ಚೆಯನ್ನು ನಡೆಸಿ
ಮಧ್ವ ಸಿದ್ಧಾಂತದಲ್ಲಿ ದೋಷವಿಲ್ಲೆಂದರು
ಆದರೂ ತಕ್ಷಣವೇ ಸ್ವೀಕರಿಸಲಿಲ್ಲ
ಜ್ಞಾನಿಗಳು ಎಲ್ಲವನೂ ಒರೆಗಲ್ಲಲಿರಿಸುವರು
 
ಶ್ರೀ ಮಧ್ವಾಚಾರ್ಯರ ಬಳಿಗೆ ತ್ರಿವಿಕ್ರಮ ಪಂಡಿತರ ಆಗಮನ
 
ಚೆಲುಮೊಗದ ಕಿರುನಗೆಯ ಕಾಂತಿಯಿಂದೊಪ್ಪುವ
ನೋಟಕರ ಮನಸಿಗೆ ಆನಂದವೀಯುವ
ಆನಂದ ತೀರ್ಥರನು ವಿಷ್ಣು ಮಂಗಲದಲ್ಲಿ
ಮಂದಹಾಸದ ಮೊಗದ ನಾಗನ ಬಳಿಗೆ
ತತ್ವಗಳ ತಿಳಿಯಲು ಅಮರೇಂದ್ರ ಬಂದಂತೆ
 
ಪಂಡಿತಾಚಾರ್ಯರು ಬಂದು ನಮಿಸಿದರು
 
68
 
230 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
69
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವ ವಿಜಯ ಕಾವ್ಯದ
ಆನಂದಾಂಕಿತ ಹದಿಮೂರನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ.