This page has not been fully proofread.

"ಆಲಿಸು, ಓ, ಕಂದ! ಆಲಿಸೆನ್ನಯ ಮಾತ ಎಚ್ಚರಿಕೆಯಿಂದ
 
ನುಡಿಯುತಿಹ ಈ ಮಾತ ಸಂಪೂರ್ಣ ಅರಿವಿಂದ
ಪರಮಾತ್ಮ ನಿರ್ಗುಣನು ಎಂಬ ಭಾವನೆ ಮಿಥ್ಯ
ಕಲಿಯುಗದಲೀ ಮಾತು ಸುಖಕ ಸಾಧನವಿರದು
ಸಕಲ ಗುಣ ಪರಿಪೂರ್ಣ ಈ ವಾಸುದೇವ
ಮುಕುತಿ ಪೊಂದಲು ನೀನು ಆತನನೇ ಸ್ಮರಿಸು"
 
ಪಂಡಿತೋತ್ತಮ ಪಿತರ ಈ ಮಾತನಾಲಿಸುತ
ಸುತನು ಅನುಭವಿಸಿದನು ಅತಿ ತೀವ್ರ ಗೊಂದಲವ
ತಂದೆಯಾ ನುಡಿಗಳಲ್ಲಿ ಸಂದೇಹವುಂಟಾಯ್ತು
ಸತ್ಯವನು ಶಾಸ್ತ್ರಾರ್ಥ ಒರೆಗಲ್ಲಿನಲ್ಲಿರಿಸಿ
 
ಸಂಸಾರ ಸಾಗರವ ದಾಟುವ ಬಯಕೆಯಲ್ಲಿ
ನಿರ್ಗುಣೋಪಾಸನೆಯ ಶ್ರವಣ ಮಾಡಿದರು
 
ವಿಹಿತ ಧರ್ಮದ ನಿರತ ಆ ತ್ರಿವಿಕ್ರಮರು
ಭವಿಗಳಲಿ ಶ್ರೇಷ್ಠರು, ಶ್ರೇಷ್ಠ ಅನುಭಾವಿಗಳು
ಅತಿ ತೀಕ್ಷ್ಮಮತಿಯನ್ನು ಹುಟ್ಟಿನಲೇ ಪಡೆದವರು
ಕಲಿಗಾಲ ಬಲದಿಂದ ವ್ಯಾಕುಲವ ಹೊಂದಿದರು
ಶಾಸ್ತ್ರ ಪ್ರಮೇಯದಲಿ ಗೊಂದಲವ ಕಾಣುತ್ತ
ಒಮ್ಮೆ ಇಂತೆಂದವರು ಆಲೋಚಿಸಿದರು
 
"ಸತ್ಯವತೀ ಸುತರಿಂದ ರಚಿತವಾಗಿಹ ಸೂತ್ರ
ತತ್ವ ನಿರ್ಣಯಕಲ್ಲ ಆಧಾರ ಸೂತ್ರ
ಈ ಬ್ರಹ್ಮಸೂತ್ರಕ್ಕೆ ಏಕವಿಂಶತಿ ಭಾಷ್ಯ
ಇವುಗಳಲ್ಲಿ ಯಾವುವೂ ಮೂಲಕ್ಕೆ ಸರಿಯಲ್ಲ
ಒಂದಕ್ಕೆ ಮತ್ತೊಂದು ತದ್ವಿರುದ್ಧ
ಇವುಗಳ ಪ್ರಾಮಾಣ್ಯ ಸ್ವೀಕರಿಸಲಾರೆ"
 
226 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
52
 
53
 
54
 
55