This page has not been fully proofread.

ಆ ಪಂಡಿತೋತ್ತಮರಿಗೆ ಪತ್ನಿಯೋರ್ವಳು ಇದ್ದು
ಅನುರೂಪ ದಾಂಪತ್ಯ ಅವರದಾಗಿತ್ತು
ವಾತ್ಸಲ್ಯಮಯಿ ಆಕೆ ಶ್ರೀ ಕೃಷ್ಣ ಭಕ್ತಿ
ಸಕಲ ಸದ್ಗುಣ ಭರಿತ, ಸೌಜನ್ಯ ಶೀಲೆ
ವಿಧಿಬರಹದಿಂದವಳು ಪುತ್ರ ಶೋಕವ ಹೊಂದಿ
ಸಂತಾನ ಪಡೆಯಲು ಹರಿ ಹರರ ಸ್ತುತಿಸಿದಳು.
 
ಹರಿ ಹರರ ಕೃಪೆಯಿಂದ ಆ ಸೂರಿಪತ್ನಿ
ಸುತರತ್ನವೊಂದನ್ನು ಶೀಘ್ರದಲ್ಲಿ ಪಡೆದಳು
ವಿಬುಧ ಸಭೆಯೆಂಬುವ ಶ್ರೇಷ್ಠ ಪಟ್ಟಣದಲ್ಲಿ
ರತ್ನ ಪರಿವೀಕ್ಷಕರು ರತ್ನಗಳ ಮೌಲ್ಯವನು
ನಿರ್ಧರಿಸಲಾಗದೆ ಕೈಕಟ್ಟಿ ಕುಳಿತಂತೆ
ಆ ಪುತ್ರರತ್ನದ ಮೌಲ್ಯ ತಿಳಿಯದೆ ಹೋಯ್ತು
 
ತಂದೆ, ಆ ನಂದನನ ವದನೇಂದುವನು ನೋಡಿ
- ತನ್ನ ಕುಲ ಉದ್ದರಿಪ ಸುತನು ಇವನೆಂದರಿತು
ಕೃತ ಕೃತ್ಯ ಭಾವದಲಿ ಆನಂದ ಪೊಂದಿದರು
ಜಾತಕರ್ಮಾದಿಗಳ ವಿಹಿತದಲಿ ಪೂರೈಸಿ
ಸೂಕ್ತ ಹೆಸರೊಂದನ್ನು ಸುತನಿಗಿಡಬೇಕೆಂದೆನಿಸಿ
ತ್ರಿವಿಕ್ರಮನೆಂದವಗೆ ಹೆಸರನಿರಿಸಿದರು
 
ಆ ಸೂರಿಪೋತನು ಅಚ್ಚರಿಯ ಕೂಸು
ಕಲಭಾಷೆಯಲ್ಲಿಯೇ ಶ್ಲೋಕಗಳನೆಲ್ಲ
ಯಾವ ದೋಷವೂ ಇರದೆ ರಚಿಸುವಂತಹ ಕೂಸು
 
ಆಕಾಶದಲ್ಲಿರುವ ಆ ಪೂಜ್ಯ ಸೂರ್ಯನು
ಉದಿಸಿದ ಕ್ಷಣದಲ್ಲೇ ಪ್ರಖರವಾಗಿರುವಂತೆ
ಈ ಶಿಶುವೂ ಪ್ರತಿಭೆಯ ಪ್ರಖರತೆಯ ತೋರಿತ್ತು
 
224 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47