This page has not been fully proofread.

ಬಾಲಕನು ಹಾರಿದನು ಸೂರಮಂಡಲದ
ತನ್ನ ತೋಳ್ಳಲದಿಂದ ರಾಹುವನೆ ಬಡಿದ
 
ಸುರಪತಿಯ ಆಯುಧರೂ ಮಣಿಯದಾ ಕಾಯ!
ಇಂತಹ ಅದ್ಭುತದ ಕಾವ್ಯಗಳ ನೋಡಿ
ದೇವಸಭೆ ಬೆರಗಾಗಿ ಸ್ತುತಿಸಿತ್ತು ಹನುಮನನು
ಸುಗ್ರೀವ ಸಖ ಕಂಡ ಲಕ್ಷ್ಮೀಶನನ್ನು
 
ಹನುಮನೆರಗಿದನಾಗ ರಾಮನಾ ಪಾದಕ್ಕೆ
ತುಂಬು ಭಕ್ತಿಯ ಭಕ್ತ ಆ ರಾಮನ ದೂತ
ಭಕ್ತಿ ಭಾವದ ಮುಗ್ಧ ಸಾಕಾರ ಮೂರುತಿಯು
ತನ್ನ ಚರಣಾರವಿಂದಗಳಿಗೆರಗಿದುದ ಕಂಡು
ಹಿಡಿದೆತ್ತಿ ನಿಲಿಸಿದನು ಶ್ರೀ ರಾಮಚಂದ್ರನು
ಕಮಲಗರ್ಭವ ಪೋಲ್ವ ತನ್ನ ತೋಳುಗಳಿಂದ
 
ಒಂಟಿ ಸಾಲಲಿ ಬೆಳೆದ ಏಳು ಸಾಲ್ಮರಗಳನು
 
ಒಂಟಿ ಬಾಣದಿ ಹೊಡೆದು ಉರುಳಿಸಿದ ರಾಮ
 
ವಾಲಿಯಂತಹರಿಗೆ ಸಾಧ್ಯವಿರದೀ ಪರಿಯು !
ಇಂದ್ರಸುತ ವಾಲಿಯನು ಸಂಹರಿಸಿದಾ ರಾಮ
ಸೂರಸುತ ಸುಗ್ರೀವಗೆ ಮುದವ ನೀಡಿದನು
 
ವಾಯುಸುತ ಹನುಮನನು ತೆಂಕಣಕ್ಕೆ ಕಳುಹಿದನು
 
ಅಪ್ರತಿಮ ಗುಣಗ್ರಾಹಿ ಶ್ರೀರಾಮನಂದು
ಹನುಮನನು ಕಿವಿಯ ಬಳಿ ಕರೆದು ತಂದು
 
ಸಂದೇಶವನ್ನು ಸುರಿ ಬೀಳ್ಕೊಟ್ಟನೆಂದು
ಕಿವಿಯವರೆಗೆಳೆದು ಬಿಟ್ಟ ಬಾಣದ ತೆರದಿ
ಶೋಭಿಸಿದ ಹನುಮಂತ, ಉಗ್ರಪ್ರತಾಪಿ !
ರೆಕ್ಕೆಗಳ ಹೊಂದಿದಾ ಅಂಬು ಈ ಹನುಮ !
 
6/ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯ
 
11
 
12
 
13
 
14