This page has not been fully proofread.

ಪುರುಷ ಲಕ್ಷಣವನ್ನು ಚೆನ್ನಾಗಿ ಅರಿತವರು
ಮಧ್ವಮುನಿಗಳ ಸಕಲ ಅವಯವನು ನೋಡಿ
ಲಕ್ಷಣದ ಶಾಸ್ತ್ರಕ್ಕೆ ಇದು ನಿದರ್ಶನವೆಂದು
ಅವಯವದಿ ಅಧ್ಯಯನಕಿದುವೆ ಮಾದರಿಯೆಂದು
ಒಮ್ಮತದಿಂ ನಿರ್ಧರಿಸಿ ತೀರ್ಮಾನಿಸಿದರು
ಇಂತಿರಲು ನಾವವರ ಬಣ್ಣಿಪುದು ಸರಿಯೆ ?
 
ಸಭೆಯಲ್ಲಿ ಶ್ರೀ ಮಧ್ವಾಚಾರ್ಯರು
ಮಧ್ವದರ್ಶನ ಬಯಸಿ ಕಾತುರದಿ ನಿಂದರು
ಸಾವಿರದ ಸಂಖ್ಯೆಯಲ್ಲಿ ಆ ಹಳ್ಳಿಗಳ ಮಂದಿ
ದರ್ಶನಾರ್ಥಿಗಳಲ್ಲಿ ನೂರಾರು ಮಂದಿ
ನೂಕುನುಗ್ಗಲಿಗಂಜಿ ದೂರವೇ ಉಳಿದರು
ತಮ್ಮ ದರ್ಶನ ಭಾಗ್ಯ ಎಲ್ಲರಿಗೂ ಸಿಗಲೆಂದು
ಮಧ್ವಮುನಿ ಎದೆಯನ್ನು ಎತ್ತರಿಸಿ ನಿಂದರು
 
ಅರಳಿರುವ ಕಣ್ಣುಗಳು, ಜೋಡಿಸಿಹ ಕೈಗಳು
ವಿನಯ ಭೂಷಿತರಾಗಿ ಆನಂದ ತೀರ್ಥರು
ಪರಮ ಗೌರವದಿಂದ ತಮ್ಮನ್ನು ಸ್ವಾಗತಿಸಿ
ಸತ್ಕರಿಸಿದಾ ಮಂದಿಯನು ತ್ವರಿತದಲ್ಲಿ ಜೊತೆಗೂಡಿ
ಶ್ರೀ ಹರಿಗೆ ಪ್ರಿಯವಾದ ಮತ್ತೊಂದು ಮಂದಿರವ
ಭಕ್ತಿಯಲಿ ಹರಿನಾಮ ಜಪಿಸುತ್ತ ಸೇರಿದರು,
 
ಜಯಸಿಂಹನೇರ್ಪಡಿಸಿ ರಾಜ ಸಭೆಯೊಂದ
ನೂರಾರು ಜನರನ್ನು ಆಹ್ವಾನಿಸಿದ್ದ
ಆ ರಾಜಸಭೆಯಲ್ಲಿ ಮಧ್ವಮುನಿ ಅಧ್ವರ್ಯು
ರಾಜರು ಬೆಳಗಿದರು ತಾರೆಗಳ ತೆರದಲ್ಲಿ
 
ಆ ತಾರೆಗಳ ನಿವಹದಲಿ ಜಯಸಿಂಹ ಮಂಗಳನು
 
ಈ ನಕ್ಷತ್ರ ಮಂಡಲದಿ ಮಧ್ವರೇ ಚಂದ್ರಮರು
 
222 / ಶ್ರೀ ಸುಮಧ್ಯ ವಿಜಯ ಕನ್ನಡ ಕಾವ್ಯ
 
36
 
37
 
38
 
39