This page has not been fully proofread.

ಮಧ್ವ ಮುನಿಗಳ ನಡಿಗೆ ಅತಿ ಗಂಭೀರವಹುದು
ಗತಿಯು ಅತಿ ತ್ವರಿತ; ಆದರೂ ತೋರುವುದು ಅತಿ ನಿಧಾನ
ಯುವ ಕೇಸರಿಯ ತೆರದಿ ಗಂಭೀರ ಹೆಜ್ಜೆಗಳು
ಪಾದಪಲ್ಲವವೆರಡು ಅತಿ ಕೆಂಪು ಬಣ್ಣ
ಇಂಥ ಅಡಿಗಳನಿಟ್ಟು ಆನಂದ ತೀರ್ಥರು
ಇಡಿಯ ಭೂಮಂಡಲವ ಪಾವನಗೊಳಿಸಿದರು
 
ಮಧ್ವಮುನಿಗಳ ಉಗುರ ಆ ದಿವ್ಯ ಕಾಂತಿಯು
ಪದ್ಮರಾಗದ ಮಣಿಯ ಕೆಂಪ ಹೋಲುತಲಿತ್ತು
ವರಕೂರ್ಮನಂತಿತ್ತು ಅವರ ಮುಂಗಾಲುಗಳು
ಅತಿ ಗೂಢವಹುದವರ ಪಾದದ ಹರಡಿಗಳು
ಸುರವರ್ಯ ಕರಗಳಲ್ಲಿ ಸೇವ್ಯ ಆ ಜಂಘಗಳು
 
ತೊಡೆಯೆರಡು ಆನೆಯ ಸೊಂಡಿಲುಗಳಂತೆ
 
ಶುಭ ಶುದ್ಧ ಕಟಿಯಲ್ಲಿ ರಾಜಿಸುತ್ತಿಹ ವಸ್ತ್ರ
ಆ ಬಾಹು ವಸ್ತ್ರವು ಶುದ್ಧ ರೇಷಿಮೆಯಹುದು
ಮಧ್ವರಾ ಉವರಡಲಿ, ಕಂಠ, ಲಲಾಟದಲಿ
ಮೂರು ಸುಸ್ಪಷ್ಟ ಶ್ರೇಷ್ಠತಮ ರೇಖೆಗಳು
ಪ್ರಕಟಗೊಂಡಿಹವಲ್ಲಿ ಶೋಭಾಯಮಾನದಲ್ಲಿ
ಮಧ್ವ ಕಾಯದ ಸೊಬಗು ಅತಿ ವರ್ಣನೀಯ
 
ಮಧ್ವಮುನಿ ಹೊದೆದಿರುವ ಆ ಶಾಲಿನ ಸೊಬಗು !
ಅತಿ ನವಿರು, ಕೋಮಲ, ಅತಿ ಗಾಢ ಕೆಂಪು !
ಈ ಕ್ಷಣದಿ ಉದಿಸಿರುವ ಸೂರ್ಯ ಕಿರಣದ ತೆರದಿ
ಮನಸೂರೆಗೈಯುವುದು ನಯವಾದ ಉಣ್ಣೆಯದು
ಇಂಥ ಶಾಲನು ಹೊದೆದ ಆ ಮಧ್ವಮು
ಸ್ವರ್ಣ ಶಿಖರವ ಪಡೆದ ಮೇರುಗಿರಿಯಾದರು
 
220 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
31