This page has not been fully proofread.

ಶುದ್ಧ ಸ್ವರೂಪರೂ ಪರಿಶುದ್ಧ ಚಿತ್ತರೂ
ವಿಭುಗಣದ ಪ್ರಭುಗಳು ಆನಂದತೀರ್ಥರು
ಎಡೆಬಿಡದೆ ಎಲ್ಲೆಡೆಯೂ ಸಂಚಾರ ಮಾಡುತ್ತ
ಎಡರು ತೊಡರಿಲ್ಲದೆಯೆ ಪಯಣವನ್ನು ಸಾಗಿಸುತ
ಸುರಸಿಂಧು ಗಂಗೆಯು ಪ್ರವಹಿಸುವ ಪರಿಯಲ್ಲಿ
ಪಯಣದ ಹಾದಿಯಲ್ಲಿ ಅತಿಶಯದಿ ಮೆರೆದರು
 
ಮದನೇಶ್ವರ ದೇವಾಲಯದಲ್ಲಿ
 
ಈ ರೀತಿ ಪಯಣವನು ಸುಲಭದಲ್ಲಿ ಸಾಗಿಸುತ
ಅಲ್ಲಲ್ಲಿ ಶಿಷ್ಯರನ್ನು ಹೆಚ್ಚಾಗಿ ಗಳಿಸುತ್ತ
ಅತಿ ಶೀಘ್ರದಲ್ಲಿಯೇ ಆನಂದ ತೀರ್ಥರು
ಸ್ತಂಭಪದವೆಂಬುವ ಸ್ಥಳವನ್ನು ಸೇರಿ
ಲೋಕಪೂಜಿತನಾಗಿ ಮದನಾಧಿಪತಿ ಇರುವ
ದೇವಮಂದಿರವನ್ನು ಭಕ್ತಿಯಲ್ಲಿ ಹೊಕ್ಕರು
 
ಆ ಸ್ಥಳದಿ ರಾತ್ರಿಯನ್ನು ಅಲ್ಲಿಯೇ ಕಳೆದು
ಮುಂಜಾನೆ ಲಗುಬಗನೆ ನಿತ್ಯವಿಧಿಗಳ ಮುಗಿಸಿ
ಸಜ್ಜಾಗಿ ನಿಂದಿರುವ ಗುರುಗಳನ್ನು ಕಂಡು
 
ಮು೦ಬರುವ ಪಯಣಕಿದು ಸೂಚನೆ ಎಂದರಿತು
 
ಶಿಷ್ಯರೆಲ್ಲರೂ ಇದನು ಸೂಕ್ಷ್ಮದಲ್ಲಿ ಗ್ರಹಿಸಿ
 
ಗುರುಗಳ ಒಡಗೂಡಿ ತೆರಳಲನುವಾದರು
 
ಪಯಣಕ್ಕೆ ಅಣಿಯಾದ ಆ ಮಧ್ವ ಶಿಷ್ಯರು
ಕಾಷಾಯ ವಸ್ತ್ರಗಳ ಕಟ್ಟಿಸುತ್ತಿಟ್ಟು
ಸ್ವಯೋಗ್ಯ ಮುದ್ರೆಯ ದಂಡ ಕಮಂಡಲುಗಳ
 
ಮತ್ತಿತರ ಆಶ್ರಮದ ಎಲ್ಲ ಸಾಮಗ್ರಿಯನು
ಸುವ್ಯವಸ್ಥಿತವಾಗಿ ಕಟ್ಟಿಟ್ಟ ಬಳಿಕ
ಮುಂಬರುವ ಪಯಣಕ್ಕೆ ಸನ್ನದ್ಧರಾದರು
 
ಹದಿಮೂರನೆಯ ಸರ್ಗ / 215
 
8
 
10
 
11