This page has not been fully proofread.

"ಎರಡು ನಾಲಿಗೆಯುಳ್ಳ ಹಾವುಗಳು ನೀವು!
ಲೋಕಪತಿ ಶ್ರೀ ಹರಿಯ ಹೃದಯದಲಿ ಧರಿಸಿರುವ
ಸಕಲ ಸಜ್ಜನಕೆಲ್ಲ ಜ್ಞಾನದಮೃತ ಕೊಡುವ
ಮಧ್ವ ಮುನಿಯೆಂಬುವ ಮತ್ತೊಬ್ಬ ಖಗರಾಜ
ನಿಮ್ಮ ಸಿರಿಸಂಪದವ ನಾಶಗೊಳಿಸುವನು
ತ್ವರೆ ಮಾಡಿ ! ಪರ್ವತದ ಬಿಲಗಳನ್ನು ಸೇರಿರಿ
 
"ಮಧ್ವನಾರಾಯಣನು ವೇದ ಚಕ್ರವ ಹಿಡಿದು
ತರ್ಕವೆಂಬುವ ಪಾಂಚಜನ್ಯವನ್ನು ಮೊಳಗಿಸುತ
ಪುರಾಣವೆಂಬುವ ಗದೆಯನ್ನು ಬೀಸುತ್ತ
ಪಂಚರಾತ್ರಗಳೆಂಬ ಖಡ್ಗವನು ಝಳಪಿಸುತ
ಬರಲಿಹನು ನಿಮ್ಮನ್ನು ನಿಗ್ರಹಿಸಲೆಂದು
ತರೆಯಿಂದ ಧಾವಿಸಿರಿ, ಓ ಮಾಯಾವಾದಿಗಳೇ !"
 
ಪ್ರಾ"ವಾಟದಲ್ಲಿ ಚಾತುರ್ಮಾಸ್ಯ
 
ಮಾಯಾವಾದಿಗಳಲ್ಲಿ ದ್ವೇಷವನೆ ತಳೆದಿದ್ದ
ಸಜ್ಜನರು ಈ ರೀತಿ ನುಡಿದು ನಲಿದಾಡಲು
ಸ್ವಾರಾಮ ಎಂಬುವ ಗ್ರಾಮವನ್ನು ಬಿಟ್ಟು
ಪ್ರಾ"ವಾಟದ ದೇವ ಮಂದಿರದಿ ಮಧ್ವರು
ಆನಂದ ಮೂರ್ತಿ ಆ ಗೋವಿಂದನ ನೆನೆದು
ನಾಲ್ಕು ತಿಂಗಳ ಕಾಲ ಅಲ್ಲಿ ನೆಲೆಸಿದರು
 
52
 
210 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
53
 
54
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವ ವಿಜಯ ಮಹಾಕಾವ್ಯದ
ಆನಂದಾಂಕಿತ ಹನ್ನೆರಡನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ