2023-02-21 18:39:39 by ambuda-bot
This page has not been fully proofread.
"ವಿಬುಧಗಣವೆಂಬುವ ಚಂದ್ರ ಕಳೆಗುಂದಿಹನು
ದುರ್ವಾದಿಗಣವೆಂಬ ತಾರೆಗಳ ಮಂಡಲವು
ಅಳಿದುಳಿದ ಕಾಂತಿಯಲಿ ನಿಸ್ತೇಜವಾಗಿಹುದು
ಈ ಚಂದ್ರ ತಾರೆಗಳ ತೇಜೋವಿಹೀನತೆಗೆ
ಕಾರಣವು ತಾನಾಗಿ ವಿಶ್ವವನ್ನು ವ್ಯಾಪಿಸಿದ
ಅಂಧಕಾರವು ಈಗ ಕೊನೆಗೊಳ್ಳುತಿಹುದು
ತನ್ನ ವಾಕ್ಕಿರಣಗಳ ನೆರವನ್ನು ಪಡೆಯುತ್ತ
ಬ್ರಹ್ಮಾದಿ ದೇವತೆಗಳಭಿಲಾಷೆ ಪೂರೈಸಿ
ಸಪ್ತವಿದ್ಯಗಳೆಂಬ ಅಶ್ವಗಳ ನೆರವಿಂದ
ಸಕಲ ಜಗಕೆಲ್ಲಕ್ಕೂ ಬೆಳಕನ್ನು ನೀಡುತ್ತ
ಕ್ರೀಡಾದಿ ಗುಣಭರಿತ ಆನಂದ ತೀರ್ಥರು
ರವಿಯ ತೆರದಲಿ ಹೊಳೆದು ಬೆಳಗುವುದ ಕಾಣಿರೇ ?
ಬ್ರಹ್ಮವೆಂಬುವ ಹೆಸರು ಶ್ರೀ ಹರಿಯೂ ಹೊತ್ತಿಹನು
ಸರ್ವರಿಗೆ ಆಧಾರ, ರಮ್ಯ ಸ್ವರೂಪನವ
ನೈದಿಲೆಯ ಹೂವಂತೆ ನೀಲವರ್ಣದ ಇವನು
ವೇದದಲಿ ವರ್ಣಿತನು ಗುಣಪೂರ್ಣನೆಂದು
ಇಂತಹ ಹರಿಪದದ ಆಶ್ರಿತನು ಮಧ್ವರವಿ
ಆತನನು ಮರೆಯಿಸಲು ಯಾರಿಗಾಹುದು ಸಾಧ್ಯ ?
"ಓಡಿರಿ, ಓಡಿರಿ, ಓ ಮಾಯಾವಾದಿಗಳೇ
ಅಲ್ಲವೆಂದೆನ್ನದಿರಿ ವೇದ ವಚನಗಳನ್ನು
ಮಧ್ವ ಮುನಿಯೆಂಬುವ ನರಹರಿಯು ಈಗ
ಜಾಜ್ವಲ್ಯ ಕಾಂತಿಯಲ್ಲಿ ಪ್ರಜ್ವಲಿಸುತಿಹನು
ಸಿಂಹಗರ್ಜನೆಯಿಂದ ಅವಿವೇಕಿಗಳನಾತ
ಸೀಳುವನು ಹರಿತನುಡಿ ಎಂಬ ನಖದಿಂದ
ಹನ್ನೆರಡನೆಯ ಸರ್ಗ / 209
48
49
50
51
ದುರ್ವಾದಿಗಣವೆಂಬ ತಾರೆಗಳ ಮಂಡಲವು
ಅಳಿದುಳಿದ ಕಾಂತಿಯಲಿ ನಿಸ್ತೇಜವಾಗಿಹುದು
ಈ ಚಂದ್ರ ತಾರೆಗಳ ತೇಜೋವಿಹೀನತೆಗೆ
ಕಾರಣವು ತಾನಾಗಿ ವಿಶ್ವವನ್ನು ವ್ಯಾಪಿಸಿದ
ಅಂಧಕಾರವು ಈಗ ಕೊನೆಗೊಳ್ಳುತಿಹುದು
ತನ್ನ ವಾಕ್ಕಿರಣಗಳ ನೆರವನ್ನು ಪಡೆಯುತ್ತ
ಬ್ರಹ್ಮಾದಿ ದೇವತೆಗಳಭಿಲಾಷೆ ಪೂರೈಸಿ
ಸಪ್ತವಿದ್ಯಗಳೆಂಬ ಅಶ್ವಗಳ ನೆರವಿಂದ
ಸಕಲ ಜಗಕೆಲ್ಲಕ್ಕೂ ಬೆಳಕನ್ನು ನೀಡುತ್ತ
ಕ್ರೀಡಾದಿ ಗುಣಭರಿತ ಆನಂದ ತೀರ್ಥರು
ರವಿಯ ತೆರದಲಿ ಹೊಳೆದು ಬೆಳಗುವುದ ಕಾಣಿರೇ ?
ಬ್ರಹ್ಮವೆಂಬುವ ಹೆಸರು ಶ್ರೀ ಹರಿಯೂ ಹೊತ್ತಿಹನು
ಸರ್ವರಿಗೆ ಆಧಾರ, ರಮ್ಯ ಸ್ವರೂಪನವ
ನೈದಿಲೆಯ ಹೂವಂತೆ ನೀಲವರ್ಣದ ಇವನು
ವೇದದಲಿ ವರ್ಣಿತನು ಗುಣಪೂರ್ಣನೆಂದು
ಇಂತಹ ಹರಿಪದದ ಆಶ್ರಿತನು ಮಧ್ವರವಿ
ಆತನನು ಮರೆಯಿಸಲು ಯಾರಿಗಾಹುದು ಸಾಧ್ಯ ?
"ಓಡಿರಿ, ಓಡಿರಿ, ಓ ಮಾಯಾವಾದಿಗಳೇ
ಅಲ್ಲವೆಂದೆನ್ನದಿರಿ ವೇದ ವಚನಗಳನ್ನು
ಮಧ್ವ ಮುನಿಯೆಂಬುವ ನರಹರಿಯು ಈಗ
ಜಾಜ್ವಲ್ಯ ಕಾಂತಿಯಲ್ಲಿ ಪ್ರಜ್ವಲಿಸುತಿಹನು
ಸಿಂಹಗರ್ಜನೆಯಿಂದ ಅವಿವೇಕಿಗಳನಾತ
ಸೀಳುವನು ಹರಿತನುಡಿ ಎಂಬ ನಖದಿಂದ
ಹನ್ನೆರಡನೆಯ ಸರ್ಗ / 209
48
49
50
51