This page has not been fully proofread.

"ತತ್ವವಾದಿಯ ಮುಕ್ತಿ ಸಗುಣತ್ವ ಸಾಧಕವು
ಅದನಲ್ಲಗಳೆಯುವುದು ಕಠಿಣತಮವಾದುದು
ಅದೈತ ಸಾಧನೆಗೆ ಇದರಿಂದ ಅಡ್ಡಿ
ಪಟ್ಕರ್ಮ ಜ್ಞಾನಿಗಳೂ, ಮಂಷಧ ವೇತ್ತರೂ
ಆಗಿಹರು ಈ ನಮ್ಮ ಪದ್ಮತೀರ್ಥಾದಿಗಳು
ನಾವವರ ರಕ್ಷಿತರು, ಯಾರೆಮ್ಮ ಸೋಲಿಪರು ?
 
"ಶಂಕರಾಚಾರ್ಯರೇ ಮೊದಲಾದ ಜ್ಞಾನಿಗಳು
ಅದೈತ ತತ್ವದ ಅಧ್ವರ್ಯು ಇಹರು
ಇಂಥವರು ಶಂಕಿಪರು ಮಧ್ವಸಿದ್ಧಾಂತವನ್ನು
ಇಂದು ಬಂದೊದಗಿರುವ ಇಂತಹ ಕುತ್ತನ್ನು
ನಿರ್ಲಕ್ಷ್ಯವನ್ನು ತೊಡೆದು ಎದುರಿಸಲೇ ಬೇಕು
ಗೋಳಿಡುವ ಕಾಲ ನಮಗಿನ್ನು ಬಂದಿಲ್ಲ
 
"ನಮ್ಮ ಈ ಜನತೆಯಲಿ ಹಲವಾರು ಮಂದಿ
ಅಲ್ಲೂ ಸಲ್ಲದ, ಇದನು ಒಲ್ಲದ ಮಧ್ಯಸ್ತರಿಹರು
ಅಂಥವರ ಮಧ್ಯದಲ್ಲಿ ಬೆರೆಯಬೇಕು
ಹೊಸದಾಗಿ
ಬಂದಿರುವ ಈ ಮಧ್ವಶಾಸ್ತ್ರವು
ಪರಂಪರೆಯ ತತ್ವವನ್ನು ಅಳಿಸುತಿದೆಯಲ್ಲ
ಎಂಬಂಥ ಸಂದೇಶ ಹರಡಬೇಕು
 
"ನಮ್ಮ ಮತ ಬ್ರಹ್ಮನನು ಅವಾಚ್ಯವೆನ್ನುವುದು
ಯಾವ ರೀತಿಯಲೆಮ್ಮ ಮತವನ್ನು ಸಾಧಿಪೆವೊ
ಅಂತೆಯೇ ನಾವಿಂದು ಹೋರಾಡಬೇಕು
ಮಾಯಾಶಕ್ತಿಯಲಿ ಎಲ್ಲವೂ ಸಿದ್ಧಿಪುದು
ನಮ್ಮ ಎದುರಾಳಿಯನು ಎದುರಿಸಲೇ ಬೇಕು
ಬಹಿರಂಗಗೊಳಿಸದಿರಿ ನಮ್ಮಭಿಪ್ರಾಯವನು
 
202 / ಶ್ರೀ ಸುಮಧ್ಯ ವಿಜಯ ಕನ್ನಡ ಕಾವ್ಯ
 
20
 
21
 
22
 
23