This page has not been fully proofread.

"ಮಧ್ವಮುನಿಗಳ ಇಂಥ ತತ್ವಬೋಧನೆಯನ್ನು
ವಿಸ್ತರಿಸಿ ಬೆಳೆವುದಕೆ ಬಿಡುವುದು ಸಲ್ಲ
ನಮ್ಮ ಮತಕಿಂದೊದಗಿ ಬಂದಿಹುದು ಆಪತ್ತು
ಲೋಕಗಳು ಕ್ಷಯಿಸುವ ಪ್ರಲಯದ ಕಾಲದಲಿ
ರಭಸದಲಿ ನುಗ್ಗುವ ಪ್ರಲಯ ಜಲದಂತೆ
ಜಗದಲ್ಲಿ ಎಲ್ಲೆಲ್ಲೂ ನುಗ್ಗಿಹರು ವೈಷ್ಣವರು "
 
ಈ ಮಾತುಗಳನಾಲಿಸಿದ ಮತ್ತೊಬ್ಬ ದುಷ್ಟ
ಪದ್ಮತೀರ್ಥರ ಮನವ ಚೆನ್ನಾಗಿ ಬಲ್ಲವನು
ದುರಭಿಮಾನವನು ಹೃದಯದಲಿ ತಳೆದವನು
ಮಂದಮತಿಯುಳ್ಳವನು ಅತಿ ಕುಟಿಲ ಮನದವನು
ತನ್ನವರ ಮನವನ್ನು ಹರುಷಗೊಳಿಸಲು ಎಂದು
ಧಾರ್ಷ್ಟ್ಯದ ನುಡಿಗಳನ್ನು ಏರುದನಿಯಲ್ಲಿ ನುಡಿದ
 
"ಮಧ್ವಶಿಷ್ಯರ ತೇಜ ಅನುಪಮವು ದಿಟವು
ಶ್ರವಣ ಮಾತ್ರದಿ ನೀವು ಕರಗದಿರಿ ಇಂತು
ಭೀರುಗಳು, ಅಭಿಮಾನ್ಯ ಶೂನ್ಯರು ನೀವು
ನಿಮ್ಮ ಈ ಹುಂಬತನಕೆನ್ನ ಧಿಕ್ಕಾರ
ನವನೀತ ಕರಗುವುದು ಅಗ್ನಿಸ್ಪರ್ಶದ ಬಳಿಕ
ಆ ನವನೀತವೇ ಗಟ್ಟಿ ನಿಮ್ಮ ಮನಸುಗಳಿಗಿಂತ
 
"ಪದ್ಮತೀರ್ಥಾದಿಗಳು ಶಂಕರರ ಶಿಷ್ಯರು
ದೇವಾದಿಗಳಿಗವರು ಬಾಧಕ ಜ್ಞಾನವನು
ಅದರ ವಿಷಯತ್ವವನ್ನು ಸಾಧಿಸುತ್ತಿಹರು
ದೇವಗುರುಗಳು ಕೂಡ ಲಜ್ಜೆ ಪಡುವಂತೆ
ಸುಖಕರದ ಅದೈತ ವಿದ್ಯಾ ವಿಶಾರದರ
ದಿವ್ಯ ಸನ್ನಿಧಿಯಲ್ಲಿ ನಮಗೇಕೆ ಚಿಂತೆ ?
 
ಹನ್ನೆರಡನೆಯ ಸರ್ಗ / 201
 
16
 
17
 
18
 
19