This page has not been fully proofread.

"ಮಾಯಾವಾದವು ತುಂಬ ಪ್ರಾಚೀನವಾದುದು
ದೌರ್ಘಟ್ಯ ಭೂಷವು ಅತ್ಯಪೂರ್ವವು
ಶಂಕರರ ಶಾಸ್ತ್ರವು ಅಚ್ಚರಿಯ ಶಾಸ್ತ್ರವು
ಈ ಜಗವು ಮಿಥ್ಯ ಎಂಬುದನ್ನು ಸಾರುವುದು
ಬ್ರಹ್ಮವಸ್ತುವು ಏಕ ಎಂಬುವುದು ಅದರರ್ಥ
ಶೃತಿ ವಾಕ್ಯಗಳು ಕೂಡ ಇವುಗಳನೆ ಹೇಳುವುವು
 
"ಈ ಜಗದಿ ಭೇದಗಳು ಎಲ್ಲರಿಗೂ ವಿದಿತ
ಮರ್ತ, ಸುರ, ದಾನವರು, ವಿಪ್ರ, ಚಂಡಾಲರೂ
ಎಲ್ಲರೂ ಇರುತಿರುವ ಈ ವಿಶ್ವವೆಲ್ಲ
ಭೇದಯುಕ್ತವು ಎಂದು ಜನಮಾನ್ಯವಾಗಿಹುದು
ಮಾಯಾವಾದದ ತತ್ವದಾಶ್ರಯವ ಪಡೆದು
ನಿರ್ಭೇದ ತತ್ವವನು ದೃಢದಿ ಸಾಧಿಸಬಹುದು
 
"ಪಾಮರರ ಮನದಲ್ಲಿ ಅಜ್ಞಾನವಿದ್ದಾಗ
ಜಗವೆಲ್ಲ ಸತ್ಯ ಎಂಬಂತೆ ತೋರುವುದು
ಮನದಲ್ಲಿ ಅಜ್ಞಾನ ಅಳಿದಾಗ ಮಾತ್ರ
ಸುಟ್ಟ ಬಟ್ಟೆಯ ತೆರದಿ ಮಿಥ್ಯತೆಯ ಅರಿವಹುದು
ತಪ್ಪ ಲೋಹದ ಮೇಲೆ ಬಿದ್ದ ನೀರಂತಿರುವ
ಜಗದ ಮಿಥ್ಯತ್ವವನು ಶಂಕರರು ಸಾರಿಹರು
 
ಜ್ಞಾನಿ ಶ್ರೇಷ್ಠನ ತರಹ ಶ್ರೇಷ್ಠ ವಿಜ್ಞಾನಿಗಳು
ಮತ್ತಿತರ ಇಂದಿನ ಎಲ್ಲ ವಿಜ್ಞಾನಿಗಳು
ನಿರ್ಗುಣ ಬ್ರಹ್ಮ ಸಾಧಿಸುತ್ತಿಹರು
ಇಂತಹ ಸಮಯದಲಿ ಓ ನಮ್ಮ ನಾಯಕರೆ
ಆಲಿಸಿರಿ ಈ ನನ್ನ ರೋಷದಾಕ್ರಂದನವ
 
ಹಾ ಹಾ ಮಾಯಾವಾದ ನಾಶಗೊಳುತಿದೆಯಲ್ಲ
 
198 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
6
 
7