This page has not been fully proofread.

ರಮಣ ರಮಣೀ ಪ್ರಣಯ ಅತ್ಯಂತ ರಮಣೀಯ
ರಮಣೀಯ ಉತ್ತುಂಗ ವರ್ತುಲದ ಸ್ತನವೆರಡು
ರಮಣನ ವಕ್ಷಕ್ಕೆ ತಡೆಯೊಡ್ಡಿ ನಿಂದಿಹವು
ತನ್ನೆರಡು ಬಲವಾದ ಬಾಹುಗಳ ಬಂಧನದಿ
ರಮಣಿಯನ್ನು ಮುದ್ದಾಡಿ ಮುತ್ತ ಮಳೆ ಸುರಿಸುವನು
ಯಾವ ರಮಣನು ತಾನೆ ಇಂಥ ಸುಖ ಸವಿಯ ?
 
ಪ್ರಿಯತಮೆಯ ಮುಖ ಒಂದು ಅರಳಿರುವ ಹೂವಂತೆ
ಮಂದಹಾಸವ ಬೀರಿ ನಳಿನಳಿಪ ಕೆನ್ನೆಗಳು
ಝಗಝಗಿಸಿ ಹೊಳೆಯುವ ಮಣಿಯ ಕುಂಡಲವು
ಮನವ ತಣಿಸುವ ಮಧುರ ಕುಡಿನೋಟಗಳು
ಇಂಥ ಚತುರೆಯ ಮುಖವ, ಇಂಥ ಚದುರೆಯ ಸುಖವ
ಬಹುಕಾಲ ಅನುಭವಿಸಿ, ಚುಂಬನದ ಮಳೆಗರೆದ
 
ಪತ್ನಿಯ ತೋಳೆಕ್ಕೆ ಪ್ರಿಯತಮಗೆ ಹಿತವಾಯ್ತು
ನಸುನಾಚಿ ಬಾಗಿದ ಪ್ರಿಯತಮೆಯ ಮುಖ ಚಂದ್ರ
ಹಿಡಿದೆತ್ತಿ ಅತಿಯಾದ ಪ್ರೇಮಾನುರಾಗದಲಿ
ಪ್ರಿಯತಮೆಯ ಅಧರ ರಸ ಹೀರುತ್ತ ಹೀರುತ್ತ
ಪ್ರಿಯತಮನು ಮುಳುಗಿದನು ಪ್ರಣಯ ಸಾಗರದಲ್ಲಿ
ಚುಂಬನವು ಎಡಬಿಡದೆ ಬಹುಕಾಲ ಸಾಗಿತ್ತು.
 
ಸುಗತ ಸಂಭ್ರಮಕೀಗ ಪ್ರಿಯತಮನು ಅಣಿಯಾದ
ಮೆಲಮೆಲನೆ ಕೈಯನ್ನು ಅವಳ ಸನಿಹಕೆ ತಂದು
ವಸ್ತ್ರವನು ಸರಿಸುವ ಸನ್ನಾಹ ನಡೆಸಿದನು
ಬೊಗಸೆಗಂಗಳ ತರುಣಿ ಅತಿ ಲಜ್ಜೆಯಿಂದ
ಪ್ರಿಯಕರನ ಕೈಗಳನ್ನು ತಡೆದು ಹೊರಳಿದಳು
ಪ್ರಿಯತಮನ ಕೈವೇಗ ಈಗ ಇಮ್ಮಡಿಯಾಯ್ತು
 
ಹನ್ನೊಂದನೆಯ ಸರ್ಗ / 189
 
56
 
57
 
58
 
59