This page has not been fully proofread.

ಶ್ರೀ ರಮಾದೇವಿಯು ಭಗವಂತನನ್ನು ಸೇವಿಸುವ ಪರಿ
"ಶ್ರೀ ಹರಿಯ ಮಂದಿರವು ರಮ್ಯ ರಮಣೀಯ
ಗೃಹಕೃತ್ಯ ನಿಪುಣೆ, ಶ್ರೀ ರಮೆಯು ಮನೆಯೊಡು
 
ಶತಕೋಟಿ ಕಿಂಕರರು ಈಕೆಯ ಅನುಚರರು
ಆದರೂ ಮನಗಲಸ ತಾನೆ ಮಾಡುವಳೀಕ
ಸಾನುರಾಗದಿ ಹರಿಯ ಸೇವೆಯನು ಮಾಳಳು
ಇಂತಿರಲು ಆ ಮನೆಯ ಹೇಗೆ ಬಣ್ಣಿಪುದು ?
 
"ಹರಿಯು ಸರ್ವೋತ್ತಮನು ಸಕಲ ಗುಣ ಪೂರ್ಣನು
 
ಕಮನೀಯನವನು ಕಮಲೆಯ ಪತಿಯು
 
ಕಮಲಲೋಚನನವನು ಕಮಲಮಾಮಲನು
 
ಶ್ರೀ ಹರಿಯು ಸ್ವರತನು; ಮೈಥುನ ವಿರಕ್ತನು
 
ಕೋಮಲಾಂಗದ ಆದಿಶೇಷನಲ್ಲಿ ಪವಡಿಸಿಹ
ರಮಿಸುವನು ಆಗಾಗ ರಮೆಯ ಕೂಡ
 
ಶ್ರೀ ಹರಿಯ ಅನಂತ ಗುಣಪೂರ್ಣತ್ವ
 
''ಶತದಶಕ ಸೂರ್ಯರಿಗೆ ಸಮನು ಶ್ರೀ ಹರಿಯು
ಕನಕ ಪೀತಾಂಬರವ ಧರಿಸಿ ಮೆರೆದಿಹನು
ನವರತ್ನ ಖಚಿತದ ಆಭರಣ ಭೂಷಿತನು
ಮೆಲುನಗೆಯ ಬೀರುವ ಚಂದ್ರಬಿಂಬದ ಮೊಗವು
 
ಪುಂಡರೀಕಾಕ್ಷನವ, ಶ್ರೀ ಚಕ್ರಪಾಣಿ
ಅನುದಿನವು ಆತನನ್ನು ಸ್ಮರಿಸಬೇಕು
 
ಶ್ರೀ ಹರಿಯು ಸಕಲ ಗುಣ ಪರಿಪೂರ್ಣನಾಗಿಹನು
ಅವುಗಳನ್ನು ಎಣಿಪುದಕೆ ಶ್ರೀ ರಮೆಗೂ ಆಗದು
ಆಗದದು ನಾಗದ ಬ್ರಹ್ಮದೇವನಿಗೂ
ಸಾವಿರದ ಮೊಗವುಳ್ಳ ನಮ್ಮಿಂದಲೂ ಆಗದು
ರುದ್ರಾದಿಗಳು ಕೆಲವು ಗುಣಗಳನ್ನು ಬಣ್ಣಿಪರು
ಅದಕಿಂತ ಮಿಗಿಲಾಗಿ ಬಣ್ಣಿಸಲು ಬಲ್ಲೆವು
 
ಹನ್ನೊಂದನೆಯ ಸರ್ಗ / 179
 
16
 
17
 
18
 
19